3,553 total views
ಉಡುಪಿ: ಈ ದೇಶದಲ್ಲಿ ನಡೆಯುತ್ತಿರುವ 80-20 ಬಲಪಂಥೀಯ ರಾಜಕೀಯವು ದ್ವೇಷದ ರಾಜಕೀಯ ಅಲ್ಲ, ಬದಲು ಭಯದ ರಾಜಕೀಯ ನಡೆಸುತ್ತಿದೆ. ಜನರನ್ನು ಭಯ ಪಡಿಸಿ ಮತ ಪಡೆದು ಅಧಿಕಾರಕ್ಕೇರುವುದೇ ಅದರ ಉದ್ದೇಶವಾಗಿದೆ. ಇದೇ ಭಯದಿಂದ ಅಭದ್ರತೆ ಮೂಡಿ ಸಮಾಜದಲ್ಲಿ ಸಂಘರ್ಷ ಉಂಟಾಗುತ್ತದೆ. ಈ ಸಂಘರ್ಷ ಇಡೀ ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ. ಆದುದರಿಂದ ಇದನ್ನು ತಪ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅದರಲ್ಲೂ ಬಹುಸಂಖ್ಯಾತರಿಗೆ ಇದೆ. ಸಂವಿಧಾನದ ಮೂಲಕ ಈ ಭಯದ ರಾಜಕೀಯವನ್ನು ವಿರೋಧಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನೀವೇ ಬೆಂಕಿ ಇಟ್ಟ ಹಾಗೆ ಆಗುತ್ತದೆ. ಬಲಪಂಥೀಯ ರಾಜಕೀಯ ಬೆಳೆಯುಲು ಬಹುಸಂಖ್ಯಾತ ಸಮುದಾಯದ ಮೌನವೇ ಮುಖ್ಯ ಕಾರಣ ಎಂದು ಮಾಜಿ ಐಎಎಸ್ ಅಧಿಕಾರಿ ಹಾಗೂ ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ರವಿವಾರ ಆಯೋಜಿಸಲಾದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನವ ರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು ದೇ ಸಂದರ್ಭದಲ್ಲಿ 2023-24ನೇ ಸಾಲಿನ ಮಾನವ ರತ್ನ ಪ್ರಶಸ್ತಿಯನ್ನು ಸಂಸದ ಸಸಿಕಾಂತ ಸೆಂಥಿಲ್, ಸೇವಾ ರತ್ನ ಪ್ರಶಸ್ತಿಯನ್ನು ಕಾರ್ಕಳದ ಉದ್ಯಮಿ ಕೆ.ಎಸ್.ನಿಸಾರ್ ಅಹ್ಮದ್ ಮತ್ತು ಚೊಚ್ಚಲ ಸೌಹಾರ್ದ ರತ್ನ ಪ್ರಶಸ್ತಿ ಯನ್ನು ಉಡುಪಿಯ ಧರ್ಮಗುರು ಫಾ.ವಿಲಿಯಮ್ ಮಾರ್ಟಿಸ್ ಅವರಿಗೆ ಪ್ರದಾನ ಮಾಡಲಾಯಿತು. ಯಾಸಿನ್ ಮಲ್ಪೆ ಮಾತನಾಡಿ ಸಮುದಾಯಗಳ ನಡುವೆ ಇರುವ ದ್ವೇಷ ಅಪನಂಬಿಕೆಗಳ ನಡುವೆ ಇರುವ ಗೋಡೆಗಳನ್ನು ಕೆಡವಿ ಪರಸ್ಪರ ಅರಿಯು ಮತ್ತು ತಿಳಿವಳಿಕೆಯ ವಾತಾವರಣವನ್ನು ಸೃಷ್ಟಿಸುದೇ ಈ ಕಾರ್ಯಕ್ರಮದ ಉದ್ದೇಶ ಎಂದು ತಿಸಿದರು ಹಿಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಸ್ವಭಾವಿಕವಾಗಿ ವಿವಿಧ ಸಮುದಾಯದಗಳ ನಡುವೆ ಸ್ನೇಹ ಮತ್ತು ಸೌಹಾರ್ದ ಇತ್ತು ಇಂತಹ ಸಮಾವೇಶಗಳ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ಸಾಧಕರಾದ ಸಾಹಿತಿ ಡಾ.ಗಣನಾಥ ಎಕ್ಕಾರ್, ಉಡುಪಿ ಜಿಪಂ ಮಾಜಿ ಅಧ್ಯಕ್ಷೆ ಸರಸು ಡಿ.ಬಂಗೇರ, ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಸರಳಾ ಕಾಂಚನ್, ದಲಿತ ನಾಯಕ ಅಣ್ಣಪ್ಪನಕ್ರೆ ಹಾಗೂ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ಹಸೈನಾರ್ ಕೋಡಿ ಕುಂದಾಪುರ ಅವರನ್ನು ಸನ್ಮಾನಿಸಲಾಯಿತು ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಶರ್ಫುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಉದ್ಯಮಿ ಅಫ್ರೋಝ್ ಅಸ್ಸಾದಿ ದುಬೈ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಸದಸ್ಯ ರಮೇಶ್ ಕಾಂಚನ್, ಸಹ ಬಾಳ್ವೆಯ ಅಧ್ಯಕ್ಷ ಕೆ.ಫಣಿರಾಜ್, ದಸಂಸ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ತರ್, ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷ ಗ್ರೇಸಿ ಕೊಯಲೋ, ಕುಂದಾಪುರದ ಕೊಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೌಸ್, ಕಾರ್ಯಕ್ರಮ ಸಂಚಾಲಕರಾದ ಇಕ್ಬಾಲ್ ಕಟಪಾಡಿ, ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು. ಹಾಫಿಝ್ ಯೂನುಸ್ ಕುರ್ಆನ್ ಪಠಿಸಿದರು. ಶಂಕರ್ ದಾಸ್ ಮತ್ತು ಬಳಗದಿಂದ ಸೌಹಾರ್ದ ಗೀತೆ, ಹೂಡೆ ಸಾಲಿಹಾತ್ ಶಾಲಾ ಶಿಕ್ಷಕಿಯರಿಂದ ಪ್ರಾರ್ಥನಾ ಗೀತೆ ಹಾಡಿದರು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇದ್ರೀಸ್ ಹೂಡೆ ವಂದಿಸಿದರು. ಡಾ.ಜಮಾಲುದ್ದೀನ್ ಹಿಂದಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.