2,631 total views
ಹುಣಸೂರು: ಮನೆ ಮುಂದೆ ನಿಲ್ಲಿಸಿದ್ದ ಕಾರ್,ಬೈಕ್ ಹಾಗೂ ಸೈಕಲ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಭಂಧಪಟ್ಟಂತೆ ಚಂದ್ರೇಗೌಡ,ಕುಮಾರ ಹಾಗೂ ಮಂಜು ಎಂಬುವರನ್ನ ಬಂಧಿಸಲಾಗಿದೆ.ಹಳೇ ಧ್ವೇಷದಿಂದ ಆರೋಪಿಗಳು ಕೃತ್ಯವೆಸಗಿದ್ದಾರೆಂದು ತೆನಿಖೆಯಲ್ಲಿ ತಿಳಿದು ಬಂದಿದೆ. ಅಕ್ಟೋಬರ್ 16 ರಂದು ಹುಣಸೂರು ತಾಲೂಕಿನ ಮುತ್ತುರಾಯನ ಹೊಸಹಳ್ಳಿ ಗ್ರಾಮದ ಮನುಕುಮಾರ್ ಎಂಬುವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಾರ್,ಸ್ಕೂಟರ್ ಹಾಗೂ ಸೈಕಲ್ ಗಳಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ರು.ಘಟನೆಯಲ್ಲಿ ಸುಮಾರು 3.15 ಲಕ್ಷ ಮೌಲ್ಯದ ಪದಾರ್ಥಗಳು ಸುಟ್ಟು ನಾಶವಾಗಿತ್ತು.ಈ ಸಂಭಂಧ ಮನುಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು.
ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್,ಡಿವೈಎಸ್ಪಿ ಗೋಪಾಲ ಕೃಷ್ಣ ಮಾರ್ಗದರ್ಶನದಲ್ಲಿ ಹುಣಸೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ನೇತೃತ್ವದಲ್ಲಿ ತಂಡ ರಚಿಸಿ ಕಿಡಿಗೇಡಿಗಳ ಬಂಧನಕ್ಕೆ ಜಾಲ ಬೀಸಲಾಗಿತ್ತು.ಸಿಸಿ ಕ್ಯಾಮರಾ ಚಲನವಲನಗಳನ್ನ ಪರಿಶೀಲಿಸಿದ ಪೊಲೀಸರು ಡಿವೈಎಸ್ಪಿ ಗೋಪಾಲ ಕೃಷ್ಣ ರವರ ನೇತೃತ್ವದಲ್ಲಿ. ಇನ್ಸ್ಪೆಕ್ಟರ್ ಮುನಿಯಪ್ಪ ರವರ ಮುಂದಳಿಕೆ ಯಲ್ಲಿ. ಸಬ್ ಇನ್ಸ್ಪೆಕ್ಟರ್ ರಾಧಾ ರವರ ಟೀಮ್ ಪೊಲೀಸರು ಮಂಜು. ಹರೀಶ್.ಪ್ರಕಾಶ್. ಪಾಂಡು PSI. ಮಹಾದೇವಮ್ಮ. ಸೇರಿದಂತೆ. ಕಳ್ಳರನ್ನು ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ..