2,621 total views
ಕಲಬುರಗಿ:-ಸಾವಳೇಶ್ವರ ಗ್ರಾಮದ ಬೀರದೇವರ ದೇವಸ್ಥಾನದ ಸರ್ವೇ ನಂ. 2ರ 1 ಎಕರೆ 34 ಗುಂಟೆ ಜಮೀನಿನ ಆಸ್ತಿಯ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್ ಮುಖಂಡರು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ವಿಧಾನಸಭೆ ಮುಖ್ಯ ಸಚೇತಕ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಕೊಪ್ಪಳ ಮಾಜಿ ಸಂಸದ ಕೆ ವೀರುಪಾಕ್ಷಪ್ಪ ಅವರು ಸಾವಳೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದು ಅವರ ಸಮುದಾಯದ ಮೇಲಿನ ಕಾಳಜಿಯಿಂದ ಹೊರತು ಬೇರೆ ಉದ್ದೇಶದಿಂದಲ್ಲ ಅಷ್ಟಕ್ಕೂ. ಕೋರ್ಟ್ ಮೂಲಕ ರದ್ದಾಗಿದ್ದರೆ ಪಹಣಿಯಲ್ಲಿ ವಕ್ಫ್ ಎಂದು ಯಾಕೆ ತೋರಿಸುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ವಿಚಾರ ಕೇವಲ ಆಳಂದ ತಾಲೂಕಿಗೆ ಸೀಮಿತವಾಗಿಲ್ಲ ಇಡೀ ರಾಜ್ಯಾದ್ಯಂತ ರೈತರ, ಮಠಗಳ, ದೇವಸ್ಥಾನಗಳ ಆಸ್ತಿಗಳನ್ನು ವಕ್ಫ್ ಎಂದು ನಮೂಸಿದ್ದಾರೆ ಇದರ ಕುರಿತು ಸ್ವತ: ವಕ್ಫ್ ಸಚಿವ ಜಮೀರ್ ಅಹ್ಮದ್ ಅವರೇ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಜಿಲ್ಲಾಧಿಕಾರಿಗಳ ಸಭೆ ಮಾಡಿದ್ದು, ವಿಡಿಯೋದಲ್ಲಿ ಹಲ್ಲುಕಚ್ಚಿ ಮಾತನಾಡಿ ಎಲ್ಲಾ ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿ ಮಾಡಿ ಎಂದು ಸೂಚಿಸಿರುವುದು ಕಾಂಗ್ರೆಸ್ ಮುಖಂಡರ ಗಮನಕ್ಕೆ ಇಲ್ಲವೇ ಎಂದು ಛೇಡಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ವರ್ತನೆಗೆ ಸ್ವತ: ಕಾಂಗ್ರೆಸ್ ಸಚಿವರು, ಶಾಸಕರು ಕಾಂಗ್ರೆಸ್ ಹೈಕಮಾಂಡಗೆ ದೂರು ಕೊಟ್ಟಿರುವುದು ನೆನಪಿಲ್ಲವೇ?. ಸಾವಳೇಶ್ವರ ಗ್ರಾಮದ ಬೀರದೇವರ ದೇವಸ್ಥಾನದ ವಿಷಯದಲ್ಲಿ ಜನರ ದಿಕ್ಕು ತಪ್ಪಿಸುತ್ತಿರುವುದು ಕಾಂಗ್ರೆಸ್ ಮುಖಂಡರು ಎಂದು ದೂರಿದ್ದಾರೆ.
ಅಷ್ಟಕ್ಕೂ ನ್ಯಾಯಾಲಯದಿಂದ ವ್ಯಾಜ್ಯ ಬಗೆಹರಿದಿದ್ದರೆ ಅದರ ದಾಖಲೆಗಳನ್ನು ಮುಖಂಡರು ಜನತೆಯ ಮುಂದಿಡಬೇಕು. ವಿರೋಧ ಪಕ್ಷದಗಳಿಂದ, ಜನಸಾಮಾನ್ಯರಿಂದ, ಮಠಾಧೀಶರಿಂದ, ಹಿಂದುಳಿದ ವರ್ಗಗಳ ನಾಯಕರುಗಳಿಂದ ಸರ್ಕಾರದ ಮೇಲೆ ಒತ್ತಡ ಬಂದಾಗ ಅಧಿಕಾರಿಗಳು ವಕ್ಫ್ ಹೆಸರನ್ನು ತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.
ವರದಿ-ಡಾ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್