3,244 total views
ಪಡುಬಿದ್ರಿ: ಅಟೋ ರಿಕ್ಷಾ ಚಾಲಕನ ನಿರ್ಲಕ್ಷದ ಚಾಲನೆಯಿಂದ ಅದಮಾರು ಪೂರ್ಣಪ್ರಜ್ಞಾ ಶಾಲೆಯ ಆಂಗ್ಲ ಮಾದ್ಯಮ ವಿಭಾಗದ ಒಂದನೇ ವಿದ್ಯಾರ್ಥಿಗೆ ರಿಕ್ಷಾ ಡಿಕ್ಕಿ ಹೊಡೆದಿದೆ. ಆವರಣದಲ್ಲಿ ನಡೆದ ಈ ಅಪಘಾತದಲ್ಲಿ ವಿದ್ಯಾರ್ಥಿಯ ಎರಡೂ ಕಾಲಿಗೂ ಗಂಭೀರ ಗಾಯಗಳಾಗಿವೆ.
ಗಾಯಗೊಂಡ ಬಾಲಕ ಎರ್ಮಾಳು ಬರ್ಪಣಿ ಸಂತೋಷ್ ಶೆಟ್ಟಿಯವರ ಪುತ್ರ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಭವಿನ್ ಶೆಟ್ಟಿ ಎಂದು ಗುರುತಿಸಲಾಗಿದೆ. ಸಂಜೆ ಶಾಲೆಯ ಅವಧಿ ಮುಗಿಯುತ್ತಿದ್ದಂತೆ ಮನೆಗೆ ಹೋಗಲು ಶಾಲೆಯ ಆವರಣದ ಒಳಗೆ ತಂದೆಯನ್ನು ಕಾಯುತ್ತಿರುವ ವೇಳೆ, ಚಾಲಕನೊಬ್ಬ ಅತೀ ವೇಗ ಹಾಗೂ
ಅಜಾಗರೂಕತೆಯಿಂದ ತನ್ನ ಅಟೋ ರಿಕ್ಷಾವನ್ನು ಮಕ್ಕಳು ಅಡ್ಡಾಡುತ್ತಿದ್ದಲ್ಲಿಗೆ, ಏಕಾಏಕಿ ನುಗ್ಗಿಸಿದ ಪರಿಣಾಮದಿಂದ, ತಂದೆಯನ್ನು ಕಾಯುತ್ತಿದ್ದ ಪುಟಾಣಿ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕನ ಎರಡೂ ಶಾಲೆಯ ಕಾಲುಗಳಿಗೂ ಗಂಭೀರ ಗಾಯಗಳಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಪಡೆಯುತಿದ್ದಾನೆ
ಈ ಅಪಘಾತಕ್ಕೆ ರಿಕ್ಷಾ ಚಾಲಕ ಸದಾನಂದ ದೇವಾಡಿಗ ಹಾಗೂ ಶಾಲೆಯ ಅವಧಿಯಲ್ಲಿ ಖಾಸಗಿ ವಾಹನಗಳನ್ನು ಆವರಣದೊಳಗೆ ಪ್ರವೇಶಿಸಲು ಅನುಮತಿಸಿದ ಆಡಳಿತ ಮಂಡಳಿಯ ವಿರುದ್ದ ಬಾಲಕನ ತಂದೆ ಸಂತೋಷ್ ಶೆಟ್ಟಿ ಬರ್ಪಾಣಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.