2,415 total views
ರಾಯಚೂರು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಕರಾಟೆ ಕಾಂಪಿಟೇಶನ್ ನಲ್ಲಿ ಹೆವೆನ್ ಫೈಟರ್ಸ ಸಂಸ್ಥೆಯ ಅಧ್ಯಕ್ಷರು ಹಾಗೂ ಸಂಸ್ಥಾಪಕರು ಅಂತರಾಷ್ಟ್ರೀಯ ಕರಾಟೆ ಕ್ರೀಡಾಪಟು ಶಿಹಾನ ಮನೋಹರ್ ಕುಮಾರ್ ಬೀರನೂರ ಹಾಗೂ ಭೀಮಶಂಕರ್ ಗೋಗಿ (ಅಂತರಾಷ್ಟ್ರೀಯ ಕರಾಟೆ ಪಟ್ಟು) ಅವರ ನೇತೃತ್ವದಲ್ಲಿ ವಿಶ್ವ ಜ್ಯೋತಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಡಿಗ್ರಿ ಕಾಲೇಜ್ ಶಹಾಪುರ ತಾಲ್ಲೂಕಿನ ವಿದ್ಯಾರ್ಥಿಗಳು ಬಸವರಾಜ್ N ವ್ಯಯಕ್ತಿಕ ಕುಮಿತೆಯಲ್ಲಿ ಚಿನ್ನದ ಪದಕ ಮತ್ತು ಟೀಮ್ ಕುಮ್ಮಿತೆ ಯಲ್ಲಿ ಪ್ರಥಮಸ್ಥಾನ ಮತ್ತು ಟೀಮ್ ಕುಮಿತೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕವನ್ನು ಗೆದ್ದಿರುತ್ತಾರೆ.
ಅದೇ ರೀತಿಯಾಗಿ ಹೆವೆನ್ ಫೈಟರ್ಸ ತರಬೇತುದಾರರಾದ ಮಲ್ಲಿಕಾರ್ಜುನ್ M ಮತ್ತು ಮೌನೇಶ್ B ಟೀಮ್ ಕುಮ್ಮಿತೆಯಲ್ಲಿ ಚಿನ್ನದ ಪದಕ್ಕವನ್ನು ಗೆದಿರುತಾರೇ , ಅದೇ ರೀತಿಯಾಗಿ ಡಿಸೆಂಬರ್ 3 ರಿಂದ 7 ರವರೇಗೇ 2024 ರಂದು ಮಧ್ಯಪ್ರದೇಶದಲ್ಲಿ ನಡೆಯಲ್ಲಿರುವ ನಡೆಯುವ ಸೌತ್ ವೇಸ್ಟ್ ಇಂಟರ್ ಯುನಿವರ್ಸಿಟಿ ಕರಾಟೆ ಪುರುಷ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು ರಾಯಚೂರು ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಲಿದ್ದಾರೆ. ಈ ಸಂದರ್ಭದಲ್ಲಿ. ವಿಶ್ವ ಜ್ಯೋತಿ ಪ್ರಥಮ ದರ್ಜೆ ಶಹಾಪುರ್ ಕಾಲೇಜ್ ,ಸರ್ಕಾರಿ ಪ್ರಥಮ ದರ್ಜೆ ಡಿಗ್ರಿ ಕಾಲೇಜ್ ಶಹಾಪುರನ ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಹೆವೆನ್ ಫೈಟರ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಹೆವೆನ್ ಫೈಟರ್ ಸಂಸ್ಥೆಯ ಸೆನಸೈ ಭೀಮಶಂಕರ್ ಗೋಗಿ ಬೀಳವಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ