2,577 total views
ಜೇವರ್ಗಿ ತಾಲೂಕಿನ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಶ್ರೀ ಕೇದಾರ್ ಲಿಂಗಯ್ಯ ಹಿರೇಮಠ ಅವರಿಗೆ ಅವರ ಅಭಿಮಾನಿ ಬಳಗದ ವತಿಯಿಂದ ಅಭಿನಂದನ ಸಮಾರಂಭ ಹಮ್ಮಿಕೊಳ್ಳಲಾಯಿತು. ಕರ್ನಾಟಕ ರಾಜ್ಯೋತ್ಸವದಂದು ಕರ್ನಾಟಕ ಸರ್ಕಾರ ವತಿಯಿಂದ ಕೇದಾರಲಿಂಗಯ್ಯ ಹಿರೇಮಠ ಅವರು ರೈತ ಹೋರಾಟಗಾರರು ರೈತಪರ ಚಿಂತಕರು ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಕೊಡಿಸಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು ಇದನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿದೆ. ಆದ್ದರಿಂದ ರೈತರತ್ನ ಕೇದಾರ್ ಲಿಂಗಯ್ಯ ಹಿರೇಮಠ ಅವರ ಅಭಿಮಾನಿ ಬಳಗದವರು ಅವರಿಗೆ ಸಜ್ಜನ್ ಕಲ್ಯಾಣ್ ಮಂಟಪದಲ್ಲಿ ಅಭಿನಂದನ ಸಮಾರಂಭ ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ರೈತ ಮುಖಂಡರು, ರೈತ ಚಿಂತಕರು, ರಾಜಕೀಯ ಮುಖಂಡರು, ಇವರನ್ನು ಕುರಿತು ಗುಣಗಾನ ಮಾಡಿದರು. ಸಂದರ್ಭದಲ್ಲಿ ವೇದಿಕೆ ಮೇಲೆ ದಿವ್ಯ ಸಾನಿಧ್ಯವನ್ನು ವಹಿಸಿದ ಸೊನ್ನದ ಶ್ರೀಗಳು ನೆಲೋಗಿ ಶ್ರೀಗಳು ಬಸವಪಟ್ಟಣ ಶ್ರೀಗಳು ಜೇರಟಿಗೆ ಶ್ರೀಗಳು ಕರ್ಕಳಿ ಶ್ರೀಗಳು ಇನ್ನು ಹಲವಾರು ಗಣ್ಯಮಾನರು ಉಪಸ್ಥಿತರಿದ್ದರು.
ವರದಿ ವಿಶ್ವನಾಥ್ ಪೂಜಾರಿ