3,631 total views
ಕುಮಟಾ – ಶಹರದ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್. ಎಸ್ .ಎಲ್. ಸಿ . ತರಗತಿಯ ಪ್ರಶ್ನೆ ಪತ್ರಿಕೆ ರಚನಾ ಕಾರ್ಯಗಾರವನ್ನು ಕರ್ನಾಟಕ ಸರ್ಕಾರದ ಉತ್ತರಕನ್ನಡ ಜಿಲ್ಲಾ ಪಂಚಾಯಿತದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿ ಹಾಗೂ ಕುಮಟಾದ ಕ್ಷೇತ್ರಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಬೆಳಗಾವಿಯ ವಿಭಾಗ ಮಟ್ಟದಲ್ಲಿ ತರಬೇತಿಯನ್ನು ಪಡೆದು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ ನಿಯುಕ್ತಿಗೊಂಡ ಈಶ್ವರ ಭಟ್ಟರವರು ಪ್ರಥಮ ಭಾಷೆ ಹಾಗೂ ತೃತೀಯ ಭಾಷೆ ಸಂಸ್ಕೃತ ವಿಷಯದ ಪ್ರಶ್ನೆ ಪತ್ರಿಕೆಯನ್ನು ನೀಲ ನಕ್ಷೆಯಂತೆ ರಚಿಸುವ ಬಗ್ಗೆ ಸವಿವರವಾಗಿ ಹೇಳಿದರು.
ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಪರೀಕ್ಷೆಗೆ ಕ್ರಮಬದ್ಧವಾಗಿ ಸಜ್ಜುಗೊಳಿಸುವ ಕುರಿತು ಅವರು ಮನವರಿಕೆಯನ್ನು ಮಾಡಿದರು. ಈ ಕಾರ್ಯಗಾರದಲ್ಲಿ ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿ, ಹಿರಿಯ ಸಂಸ್ಕೃತ ಶಿಕ್ಷಕರಾದ ಸುಜಾತ ದೇವರಬಾವಿ, ಗೀತಾ ಭಟ್, ರಾಜು ನಾಯ್ಕ, ಸುರೇಶ ಹೆಗಡೆ, ಸುವರ್ಣ ಬಂಟ, ಸುಬ್ರಹ್ಮಣ್ಯ ಭಟ್ಟ ಹಾಗೂ ಪ್ರದೀಪ ಮೊದಲಾದವರಿದ್ದರು.