2,622 total views
ಕುಮಟಾ :-ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಪಟ್ಟಣದ ಮಹಾಸತಿ ದೇವಸ್ಥಾನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪ್ರಮುಖರು ಸೇರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಈ ಚುನಾವಣೆಯಲ್ಲಿ ದೊಡ್ಡ ಅಂತರದ ಮತಗಳಿಂದ ಗೆಲುವಿಗಾಗಿ ಕುಮಟಾ -ಹೊನ್ನಾವರ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ನಾಯಕರು ಸೇರಿ ಕುಮಟಾ ಮಹಾಸತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು.
ಈ ಸಂಧರ್ಭದಲ್ಲಿ ಕುಮಟಾ ತಾಲೂಕಾಧ್ಯಕ್ಷ ಸಿ ಜಿ ಹೆಗಡೆ, ಪ್ರಧಾನ ಕಾರ್ಯದರ್ಶಿ ದತ್ತು ಪಟಗಾರ, ಹೊನ್ನಾವರ ತಾಲೂಕಾಧ್ಯಕ್ಷ ಟಿ ಟಿ ನಾಯ್ಕ್ ಗೋವಿಂದ ಶಾನಭಾಗ, ಸಂಪತ್ ಕುಮಾರ್, ಬಲಿಂದ್ರ ಗೌಡ, ರಾಜೇಶ್ ಪಟಗಾರ, ಬಾಬು ಗೌಡ, ಅಣ್ಣಪ್ಪ ನಾಯ್ಕ್, ದಿವಾಕರ್ ನಾಯ್ಕ್ ಅರುಣ ಗಾಡಿಗ, ಚಂದ್ರಶೇಖರ ಪಾಲೇಕರ್, ಅನಂತ ಗೌಡ, ಗಿರೀಶ್,ಲಕ್ಷ್ಮೀಕಾಂತ, ನಾಗೇಶ್ ನಾಯ್ಕ ಹೆರವಟ್ಟಾ, ನಾಗರಾಜ್ ನಾಯ್ಕ್ ಕಾಗಲ್,ಹಾಗೂ ಇನ್ನಿತರರು ಉಪಸ್ಥಿತರಿದ್ದರು.