3,628 total views
ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ದಾಲ್ಮೀಯಾ ಭಾರತ ಪೌಂಡೇಷನ ವತಿಯಿಂದ ಜೀವನೋಪಾಯಕ್ಕಾಗಿ ಉನ್ನತಿ ಗ್ರಾಮ ಅಭಿವೃದ್ಧಿ ಸಂಘ (ಸ್ವ ಸಹಾಯ ಸಂಘಗಳ ಒಕ್ಕೂಟ) ಯಾದವಾಡಕ್ಕೆ ನಾಲ್ಕು ಲಕ್ಷ ರೂಪಾಯಿಗಳ ಧನ ಸಹಾಯದ ಚೆಕ್ ವಿತರಿಸಿದರು . ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಭಾತ ಕುಮಾರಸಿಂಘ್ ಕಾರ್ಖಾನೆಯ ಮುಖ್ಯಸ್ಥರು ಬೆಳಗಾವಿ ವಹಿಸಿಕೊಂಡಿದ್ದರು, ಮುಖ್ಯ ಅತಿಥಿಗಳಾಗಿ ವಂದನಾ ಸಿಂಘ ಸ್ಪೂರ್ತಿ ಲೇಡಿಜ್ ಕ್ಲಬ್ ಬೆಳಗಾವಿ ಅತಿಥಿಗಳಾಗಿ ಬಸವರಾಜ ವೀ. ಭೂತಾಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಯಾದವಾಡ ಅವದೇಶಕುಮಾರಸಿಂಘ ಮಾನವಸಂಪನ್ಮೂಲ ಇಲಾಖೆ ದಾಲ್ಮೀಯ ಉಪಸ್ಥಿತರಿದ್ದರು. ,ಕಾರ್ಯಕ್ರಮವನ್ನು ಉದ್ದೇಶಿಸಿ ಕಾರ್ಖಾನೆಯ ಮುಖ್ಯಸ್ಥರು ಮಾತನಾಡಿ ಮಹಿಳೆಯರ ಸಬಲೀಕರಣ ಗ್ರಾಮದ ಅಭಿವೃದ್ದಿಗೆ ಅತ್ಯಂತ ಅವಶ್ಯಕವಾಗಿರುತ್ತದೆ. ಕಡಿಮೆ ಬಡ್ಡಿದರದಲ್ಲಿ ಮಹಿಳೆಯರಿಗೆ 10,೦೦೦ ಸಾಲದ ರೂಪದಲ್ಲಿ ನೀಡುತ್ತಿದ್ದು ಇದರಿಂದ ಸಣ್ಣ ಪುಟ್ಟ ಕೆಲಸಗಳನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಬೇಕು ಎಂದರು ಹೈನುಗಾರಿಕೆ , ಕುರಿ ಸಾಕಾನಿಕೆ , ಗ್ರಹಕೈಗಾರಿಕೆ, ಮತ್ತು ಸಣ್ಣ ಅಂಗಡಿಗಳನ್ನು ತೆಗೆದು ವ್ಯಾಪಾರ ಮಾಡಿ ಸ್ವಾವಲಂಬಿಗಳಾಗಬೆಕೆಂದು ಹೇಳಿದರು ದಾಲ್ಮೀಯಾ ಪೌಂಡೆಷನ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗ್ರಾಮಪರಿವರ್ತನ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸ್ವಉದ್ಯೋಗದ ತರಬೇತಿ ನೀಡಿ ಅವರಿಗೆ ವ್ಯಾಪಾರ ಮಾಡಲು ಹಣದ ಸಹಾಯವನ್ನು ನೀಡುತ್ತದೆ ಗ್ರಾಮದ ಅಭಿವೃದ್ದಿಯ ಸಲುವಾಗಿ ನಮ್ಮ ಸಿ.ಎಸ್.ಆರ್. ಟೀಮ್ ಯಾವಾಗಲು ನಿಮ್ಮ ಜೊತೆಗೆ ಇರುತ್ತದೆ ಮಹಿಳೆಯರ ಆರ್ಥಿಕ ಅಭಿವೃದ್ದಿಯಿಂದ ಗ್ರಾಮ ಅಭಿವೃದ್ದಿಯಾಗುತ್ತದೆ. ಗ್ರಾಮದ ಅಭಿವೃದ್ದಿಯೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ನಿರುಪಣೆಯನ್ನು ರಾಮನಗೌಡರ ಮಾಡಿದರು ಪ್ರಾಸ್ತಾವಿಕ ಭಾಷಣವನ್ನು ಶ್ರೀಧರ ಪಾಟೀಲ ಮಾಡಿದರು