3,298 total views
ಕಲಬುರಗಿ:- ಜಿಲ್ಲೆಯ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ಏಳನೇ ವರ್ಷದ ರಾಜ್ಯಮಟ್ಟದ ಅವ್ವ ಪ್ರಶಸ್ತಿಗಳನ್ನು ಘೋಷಿಸಿದೆ.
ಲೇಖಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಅವರ ವೀರ ಸೌಧಾಮಿನಿ ಕಿತ್ತೂರ ರಾಣಿ ಚನ್ನಮ್ಮ (ಸಂಶೋಧನ ಕೃತಿ ), ಪಾರ್ವತಿ ವಿ ಸೋನಾರೆ ಅವರ ಓಡಿ ಹೋದಾಕಿ(ಕಾದಂಬರಿ) ಹಾಗೂ ಜ್ಯೋತಿ ಬೊಮ್ಮಾ ಅವರ ಎಲ್ಲರೊಳಗೊಂದಾಗಿ (ಕವನ ಸಂಕಲನ ) ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪೂಜ್ಯ ಗುರುಪಾದಲಿಂಗ ಮಹಾ ಶಿವಯೋಗಿಗಳು (ಕೃಷಿ ಹಾಗೂ ಧಾರ್ಮಿಕ ಕ್ಷೇತ್ರ),ಜಯಶ್ರೀ ಬಸವರಾಜ ಮತ್ತಿಮಡು (ಸಮಾಜ ಸೇವೆ ಕ್ಷೇತ್ರ) ಹೋರಾಟಗಾರ ಡಾ. ಲಕ್ಷ್ಮಣ ದಸ್ತಿ (ಹೋರಾಟ ) ಅವರನ್ನು ಅವ್ವ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ.
ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ್.