3,635 total views
ಆನೇಕಲ್ : ಅದು ಬರೋಬರಿ 10ವರ್ಷದ ಬಳಿಕ ಎಲ್ಲರೂ ಒಟ್ಟಿಗೆ ಸೇರಿದ ಸಮಯ. ಎಲ್ಲರೂ ಒಂದಲ್ಲ ಒಂದು ರೀತಿ ಬ್ಯುಸಿಯಾಗಿದ್ದರೂ ಆ ಕಾರ್ಯಕ್ರಮಕ್ಕಾಗಿಯೇ ಆಗಮಿಸಿದ್ದರು. ಜೀವನಕ್ಕೆ ಭದ್ರಬುನಾದಿ ಹಾಕಿಕೊಟ್ಟ ಗುರುಗಳಿಗೆ ಪ್ರೀತಿಯಿಂದ ಸನ್ಮಾನಿಸಿದರು. ಒಟ್ಟಾರೆ ಇಡೀ ದಿನ ನೆನಪುಗಳನ್ನು ಮೆಲುಕು ಹಾಕಿಕೊಂಡೇ ಮತ್ತೆ ಬಾಲ್ಯಕ್ಕೆ ಜಾರಿದರು.
ಇಂತಹ ವಿಶೇಷವಾದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಆನೇಕಲ್ ತಾಲ್ಲೂಕ್ ಭಾರತಿ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಾಲೆಯ 2014-2015ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್ನ ಹಿರಿಯ ವಿದ್ಯಾರ್ಥಿಗಳಿಂದಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಿವೃತ್ತ ಶಿಕ್ಷಕರು ಮತ್ತು ಸಹ ಶಿಕ್ಷಕರು ಹಾಗೂ ಸಹಪಾಠಿಗಳೆಲ್ಲ ಒಂದೆಡೆ ಸೇರಿ ಕಾಲ ಕಳೆಯುವಂತಾಯಿತು.
ಇತ್ತೀಚಿನ ದಿನದಲ್ಲಿ ಗುರುವಂದನೆ ಕಾರ್ಯಕ್ರಮ ಟ್ರೆಂಡ್ ಆಗುತ್ತಿದೆ. ಈ ಮೂಲಕ ತಮ್ಮ ಜೀವನಕ್ಕೆ ಸರಿದಾರಿ ಮಾರ್ಗ ತೋರಿದ ಶಿಕ್ಷಕರನ್ನು ಸನ್ಮಾನಿಸಿ ಪ್ರೀತಿ ತೋರಿಸುವ ವಿಶೇಷತೆ ನಡೆಯುತ್ತಿದೆ. ಅದರಂತೆ ಆನೇಕಲ್ ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿರುವ ಭಾರತಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು. 2014-15ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್ನ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ತೋರಿದ ಪ್ರೀತಿಗೆ ಶಿಕ್ಷಕರು ಮೂಕ ವಿಸ್ಮಿತರಾದರು. ಮಾತ್ರವಲ್ಲದೆ ಭಾವುಕರಾಗಿದ್ದಲ್ಲದೆ ತಮ್ಮ ಶಿಷ್ಯಂದಿರು ರೂಪಿಸಿಕೊಂಡಿರುವ ಸದೃಢ ಬದುಕನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಇತ್ತ ಶಿಷ್ಯಂದಿರು ಕೂಡ ಕಡಿಮೆ ಏನಲ್ಲ. ವ್ಯಾಸಂಗ ಮಾಡುವಾಗ ಕೊಟ್ಟ ಏಟುಗಳು, ಸ್ನೇಹಿತರೊಟ್ಟಿಗೆ ಕಳೆದ ಹರಟೆಯ ಕ್ಷಣಗಳನ್ನು ಮೆಲುಕು ಹಾಕಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶ್ರೀ. ಕೆ. ವಿಶ್ವನಾಥ್ ರವರು ತಿಲಕ್ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು, ಶ್ರೀಯುತ ನಾಗಲೇಖರವರು ಸಾಹಿತಿಗಳು ಮತ್ತು ಜನಸಿರಿ ಫೌಂಡೇಷನ್ ಮುಖ್ಯಸ್ಥರು, ಶ್ರೀಯುತ ಚುಟುಕು ಶಂಕರ್ ರವರು ಚುಟು ಚುಟು ಸಾಹಿತಿಗಳು ಹಾಗೂ ಆನೇಕಲ್ ತಾಲ್ಲೂಕಿನ ಭಾರತಿ ಶಾಲೆಯ ಶ್ರೀಯುತ ಕೃಷ್ಣರೆಡ್ಡಿರವರು, ಶ್ರೀಯುತ ಸಿ ಮುನಿರಾಜುರವರು, ಶ್ರೀಯುತ ಗೋವಿಂದಪ್ಪ ಆರ್. ರವರು, ಶ್ರೀಯುತ ಪುಟ್ಟಸ್ವಾಮಿ ರವರು, ಶ್ರೀಯುತ ಗುರುದತ್ ಎನ್. ರವರು, ಶ್ರೀಯುತ ನಾಗರಾಜ್ ಎಚ್.ಎಲ್. ರವರು, ಶ್ರೀಯುತ ಶಶಿಧರ್ ಎನ್.ಎಸ್.ರವರು, ಶ್ರೀಯುತ ಹೆಚ್. ಶ್ರೀನಿವಾಸ್ ರವರು, ಶ್ರೀಯುತ ಪ್ರಕಾಶಪ್ಪ ಹೆಚ್.ಎಂ.ರವರು, ಶ್ರೀಯುತ ಕುಮಾರ್ ಸ್ವಾಮಿರವರು, ಶ್ರೀಮತಿ ಮಂಜುಳಮ್ಮರವರು, ಶ್ರೀಮತಿ ಭಾರತಿ ಸಿ. ರವರು, ಶ್ರೀಮತಿ ಸಣ್ಣಗಂಗಮ್ಮರವರು, ಶ್ರೀಮತಿ ಶೋಭರಾಣಿರವರು, ಶ್ರೀಮತಿ ಮಂಜುಳಾ ಎ.ರವರು, ಶ್ರೀಯುತ ಈಡಿಗರ ಹನುಮಂತಪ್ಪರವರು, ಶ್ರೀಯುತ ಯಲ್ಲಪ್ಪ ಎ.ರವರು, ಶ್ರೀಯುತ ಎಂ. ಮುನೇಗೌಡರವರು, ಶ್ರೀಮತಿ ಲೀಲಾಕುಮಾರಿರವರು, ಶ್ರೀಯುತ ಸೈಯದ್ ರಹಮತ್ ಉಲ್ಲಾರವರು, ಶ್ರೀಮತಿ ಕೆ.ಸರಸ್ವತಿರವರು, ಶ್ರೀಯುತ ತಿಪ್ಪೇಸ್ವಾಮಿ ರವರು ತಮ್ಮ ಗುರುಗಳನ್ನು ಗುರುವಂದನೆಯನ್ನು ಮಾಡುವಾಗ ಶಿಷ್ಯಂದಿರ ಖುಷಿಗೆ ಪಾರವೇ ಇರಲಿಲ್ಲ.
ಕಾರ್ಯಕ್ರಮದ ಉಸ್ತುವಾರಿಗಳಾದ ನಾಗರಾಜ್ ಪದ್ಮಶಾಲಿ, ದ್ರುವ ಕುಮಾರ್, ಚೇತನ್, ವೇಣು, ರಾಮಚಂದ್ರ, ಯಶವಂತ್, ಕಿಶೋರ್, ಶಂಕರ್, ಶೈಲ, ಚೈತ್ರ, ವೀಣಾ, ಉಮಾ, ಸುಷ್ಮಾ ಮತ್ತು ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.
ವರದಿ :- ನಾಗರಾಜ್ ಪದ್ಮಶಾಲಿ