2,629 total views
ಕೆ.ಆರ್. ನಗರ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಲೆಂದು ಆಶಿಸಿ ಜೆಡಿಎಸ್ ನಗರಾಧ್ಯಕ್ಷರಾದ ಸಂತೋಷ್ ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ರುದ್ರೇಶ್ ನೇತೃತ್ವದಲ್ಲಿ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ಸೇರಿದಂತೆ ಕೆ.ಆರ್. ನಗರದ ಎಲ್ಲಾ ದೇವಾಲಯಗಳಲ್ಲಿ ಹೋಮ ಹವನ ಅರ್ಚನೆ ಮಾಡುವ ಮೂಲಕ ಸಿಹಿ ಹಂಚಿ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಮೀನಾಕ್ಷಿ ಸಮೇತ ಅರ್ಕೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಚನ್ನಪಟ್ಟಣ ವಿಧಾನಸಭಾ ಅಭ್ಯರ್ಥಿ ಕುಮಾರಸ್ವಾಮಿ ವಿಜಯಶಾಲಿಯಾಗಲೆಂದು ವಿಶೇಷ ಪೂಜೆ ಮತ್ತು ಪ್ರಾರ್ಥನೆ ಮಾಡಿದ ಜೆಡಿಎಸ್ ಪಕ್ಷದ ನಗರಾಧ್ಯಕ್ಷರಾದ ಸಂತೋಷ್ ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ರುದ್ರೇಶ್ ನೇತೃತ್ವದಲ್ಲಿ
ದೇವಾಲಯಕ್ಕೆ ಬಂದ ಭಕ್ತರಿಗೆ ಸಿಹಿ ಹಂಚಿದರು.
ಬಳಿಕ ನಗರಾಧ್ಯಕ್ಷ ಸಂತೋಷ್ ಗೌಡ ಮಾತನಾಡಿ, 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ನಿಖಿಲ್ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಪ್ರಧಾನ ಕಾರ್ಯದರ್ಶಿ ರುದ್ರೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಹಗರಣಗಳ ಸೆರೆಮಾಲೆಯಲ್ಲಿ ಸುತ್ತಿಕೊಂಡು ಹೊರಬರಲಾಗದೆ ನರಳುತ್ತಿದೆ. ಚನ್ನಪಟ್ಟಣದ ಪ್ರಜ್ಞಾವಂತ ಮತದಾರರು ಇದನ್ನು ಅರಿತಿದ್ದು ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರಿಗೆ ಮತ ನೀಡಲಿದ್ದಾರೆ ಎಂದರು.
ಜಿಲ್ಲಾ ಜೆಡಿಎಸ್ ಮಹಿಳಾ ಅಧ್ಯಕ್ಷರಾದ ದಾಕ್ಷಾಯಿಣಿ, ತಾಲೂಕು ಮಹಿಳಾ ಅಧ್ಯಕ್ಷರಾದ ರಾಜ್ಯಲಕ್ಷ್ಮಿ, ನಿವೃತ್ತ ಶಿಕ್ಷಕರಾದ ರಾಮಕೃಷ್ಣ, ನಗರ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ದೀಪು, ತಮ್ಮಣ್ಣ, ಮೋಹನ್ ಕುಮಾರಿ, ವಂದನ ಸೇರಿದಂತೆ ಇತರರು ಇದ್ದರು.