2,648 total views
ಕುಮಟಾ :-ಕೆನರಾ ಕಾಲೇಜ್ ಸೊಸೈಟಿ( ರಿ) ಡಾ ಎವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಘಟಕ (ಲೇಡೀಸ್ ಸೆಲ್) ಸ್ಪೂರ್ತಿ”ಯ ಉದ್ಘಾಟನೆ ಅದ್ದೂರಿಯಿಂದ ನೆರವೇರಿತು
ಉದ್ಘಾಟಕರಾಗಿ ಆಗಮಿಸಿದ ಡಾಕ್ಟರ್ ಅಶೋಕ್ ಕೆ ಭಟ್ ಚೇರ್ಮನ್, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಕುಮಟಾ ಅವರು ಮಹಿಳೆಯರಲ್ಲಿ ದಿನನಿತ್ಯ ಕಾಡುವಂತಹ ಆರೋಗ್ಯದ ಸಮಸ್ಯೆಗಳ ಬಗ್ಗೆ ಸವಿವರವಾಗಿ ಮಾತನಾಡಿದರು. ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ನಿರಾಯಸವಾಗಿ ಸರಿದೂಗಿಸಬಹುದು ನಿತ್ಯ ಜೀವನ ಕ್ರಮದಲ್ಲಿ ಆರೋಗ್ಯವಂತ ಆಹಾರ ಹಾಗೂ ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದರಿಂದ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಮಹಿಳೆಯರು ಅಬಲೇಯರಲ್ಲ ಸಬಲೆಯರು . ಯಾವುದೇ ಗುರಿಯನ್ನು ಸಾಧಿಸಲು ಛಲವಿರಬೇಕು ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳಬಾರದು ಎಂದು ಹೇಳಿದರು . ಮಾನಸಿಕವಾಗಿ ಸದೃಢವಾಗಬೇಕು ಹಾಗೂ ಜೀವನದಲ್ಲಿ ಎಂತಹ ಕಠಿಣ ಕಷ್ಟ ಕಾರ್ಪಣ್ಯ ಗಳಲ್ಲಿ ಕೂಡ ಕುಗ್ಗಬಾರದು ಧೈರ್ಯದಿಂದ ಎದುರಿಸಬೇಕು ಎಂದು ವಿವರವಾಗಿ ಹಲವಾರು ಕಥೆಗಳ ನಿದರ್ಶನದ ಮೂಲಕ ಡಾ. ಪ್ರೀತಿ ಭಂಡಾರ್ಕರ್ ಪ್ರಾಚಾರ್ಯರು ಕಮಲಾ ಬಾಳಿಗ BEd ಕಾಲೇಜ್ ಹಾಗೂ ವೈಸ್ ಚರ್ಮನ್ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶ್ರೀಮತಿ ಸಂತಾನ ಲೂಯಿಸ್, ಮ್ಯಾನೇಜರ್ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಕುಮಟಾ ಇವರು ಸಭೆಯನ್ನು ಉದ್ದೇಶಿಸಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು.
ಡಾಕ್ಟರ್ ಅನುರಾಧ ಕೆ ಸಿ ,
ಆರೋಗ್ಯ ಅಧಿಕಾರಿ ,ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಕುಮಟಾ ಅವರು ಮಕ್ಕಳಿಗೆ ಪವರ್ ಪಾಯಿಂಟ್ ಪ್ರಸ್ತುತಿಯ ಮೂಲಕ ಹೆಣ್ಣು ಮಕ್ಕಳಲ್ಲಿ ಹದಿಹರೆಯದಲ್ಲಿ ಆಗುವ ದೈಹಿಕ ಬದಲಾವಣೆ ಹಾಗೂ ಅದರಿಂದ ಬರುವಂತಹ ಸಮಸ್ಯೆಗಳ ಬಗ್ಗೆ ವಿವರವಾಗಿ ತಿಳಿಸಿದರು. ಋತುಚಕ್ರದ ಸಮಯದಲ್ಲಿ ಅನುಭವಿಸುವ ದೈಹಿಕ ಹಾಗೂ ಮಾನಸಿಕ ನೋವಿನ ಬಗ್ಗೆ ಭಯಪಡುವುದು ಬೇಡ ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದೆ ಎಂದು ತಿಳಿಸಿದರು . ಹಿರಿಯರು ಹೇಳುವ ಹಾಗೂ ಮನೆಯ ಮದ್ದು ಮಾಡುವ ಜೊತೆಗೆ ವೈದ್ಯರ ಸಲಹೆಯನ್ನು ಪಡೆಯುವುದು ತುಂಬಾ ಅವಶ್ಯ ಎಂದು ಹೇಳಿದರು. ಒಳ್ಳೆಯ ಆಹಾರ ಪದ್ಧತಿ ಹಾಗೂ ದೈಹಿಕ ಶ್ರಮ, ನಿತ್ಯ ವ್ಯಾಯಾಮ ಮಾಡುವುದರಿಂದ ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು. ಹೆಣ್ಣು ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರೊಂದಿಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆಯಬಹುದು ಎಂದು ಹೇಳಿದರು. ವಿದ್ಯಾರ್ಥಿಯ ಜೀವನ ಓದಿನ ಕಡೆ ಹೆಚ್ಚು ಗಮನವನ್ನು ಕೊಡುವಂತಹದ್ದು ಮನಸ್ಸನ್ನು ಚಂಚಲಗೊಳಿಸದೆ ಏಕಾಗ್ರ ಚಿತ್ತೆ ಇಂದ ನಮ್ಮ ಜೀವನದ ಧ್ಯೇಯವನ್ನು ಪಡೆಯಲು ಶ್ರಮಿಸಬೇಕೆಂದು ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಡಾ. ರೇವತಿ ರಾವ್ ಪ್ರಾಚಾರ್ಯರು ಡಾಕ್ಟರ್ ಎವಿ ಬಾಳಿಗ ವಾಣಿಜ್ಯ ವಿಭಾಗ ಸಭೆಯನ್ನು ಉದ್ದೇಶಿಸಿ ಮಹಿಳಾ ಘಟಕ ಸ್ಪೂರ್ತಿಯ ಸದುದ್ದೇಶಗಳ ಬಗ್ಗೆ ಮಕ್ಕಳಿಗೆ ತಿಳಿ ಪಡಿಸಿದರು ಹಾಗೂ ವಿದ್ಯಾರ್ಥಿನಿಯರಲ್ಲಿ ಎಂತಹ ಸಮಸ್ಯೆಗಳಿದ್ದರೂ ಕೂಡ ಮುಕ್ತವಾಗಿ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆಯಬೇಕೆಂದು ಹೇಳಿದರು. ಸಮಾಜದಲ್ಲಿ ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ವಿಜಯಶೀಲರಾಗಬೇಕು ಎಂದು ವಿದ್ಯಾರ್ಥಿ ನಿಯರಿಗೆ ಕರೆಕೊಟ್ಟರು.
ವಿದ್ಯಾರ್ಥಿನಿಯರು ದೈಹಿಕ ಹಾಗು ಮಾನಸಿಕ ಒತ್ತಡದಿಂದ ಹೊರಬರಲು ಬೇಕಾಗುವಂತಹ ಕೌನ್ಸಿಲಿಂಗ್ ಯೂನಿಟ್ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ adolescent ಕ್ಲಿನಿಕ್ ಅನ್ನು ಇಂದು ಉದ್ಘಾಟಿಸಲಾಯಿತು.
ಪ್ರೋ.ನಿರ್ಮಲಾ ಪ್ರಭು ಲೇಡೀಸ್ ಸೆಲ್ ಕನ್ವೀನರ್ ಸ್ವಾಗತಿಸಿದರು. ಕುಮಾರಿ. ಪ್ರಜ್ಞಾ ಪ್ರಾರ್ಥಿಸಿದರು, ಕುಮಾರಿ. ಕೃತಿಕಾ ಹಾಗೂ ಕುಮಾರಿ ಕ್ಯಾರೋಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರೊ. ಸುಷ್ಮಾ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂ ಎಸಿ ಕೋಆರ್ಡಿನೇಟರ್ ಪ್ರೊ. ರಾಗಿಣಿ ಹಾಗೂ ಪ್ರೊ. ಮೇಘ ,ಪ್ರೊ. ಮೋಹಿನಿ ಪ್ರೊ. ನಿಕಿತಾ ಮತ್ತು ಬಿಕಾಂ ಹಾಗೂ ಬಿಬಿಎ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು .