2,602 total views
ಮೂಡಲಗಿ – ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕನ್ನವರ, ಉಪಾಧ್ಯಕ್ಷರಾಗಿ ಸಾಮಾನ್ಯ ಮಹಿಳಾ ವರ್ಗದಿಂದ ಶ್ರೀಮತಿ ಲಕ್ಷ್ಮಿ ಮಂಜುನಾಥ್ ಹೇಳವರ ಇವರು ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣೆಯ ಫಲಿತಾಂಶವನ್ನು ಚುನಾವಣಾ ಅಧಿಕಾರಿ ಶ್ರೀಮತಿ ಆರ್ ಪಿ ನಾರಾಯಣಕರ ಪ್ರಕಟಿಸಿದರು .ಈ ಸಂದರ್ಭದಲ್ಲಿ ಪಂಚಾಯಿತ ಪಿಡಿಒ ರವಿ ಮರೆಣ್ಣವರ, ಮುಖಂಡರಾದ ಲಕ್ಷ್ಮಣ ಬಂಡ್ರೋಳಿ, ರಾಮಪ್ಪ ಅರಭಾಂವಿ, ಭೀಮಪ್ಪ ನಾವಿ ,ಶಂಭುಲಿಂಗ ಮುಕ್ಕಣ್ಣವರ, ಶಿವಪುತ್ರ ಬಂಡಿನವರ್, ಗುಂಡೂರಾವ್ ಗುಜನಟ್ಟಿ, ಹನಮಂತ ರೋಡಲಕ್ಕನವರ, ಗುರುನಾಥ ಗಂಗಣ್ಣವರ ಗ್ರಾಮ ಪಂಚಾಯತ್ ಸದಸ್ಯರು ಸಿಬ್ಬಂದಿಗಳು ಹಾಜರಿದ್ದರು.
ವರದಿಗಾರರು-ಶ್ರೀ ಕಲ್ಲಪ್ಪ ಲ ಮುಕ್ಕನ್ನವರ.