2,611 total views
ಹೊನ್ನಾವರ :- ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠಮ್, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಅಕ್ಟೋಬರ್ 03ರಿಂದ 17ರವರೆಗೆ “ಯಕ್ಷ ಪೂರ್ಣಿಮೆ – 2024” ಎಂಬ ಹೆಸರಿನೊಂದಿಗೆ ಪೌರಾಣಿಕ ಯಕ್ಷಗಾನ ಸೇವೆಯನ್ನು ಆಯೋಜಿಸಲಾಗಿತ್ತು. ದಿನಾಂಕ 17-10-2024ರಂದು ‘ಯಕ್ಷಾಂಜನೇಯ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮ ಹಾಗೂ “ಯಕ್ಷ ಪೂರ್ಣಿಮೆ – 2024”ರ ಸಮಾರೋಪ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಶ್ರೀಕ್ಷೇತ್ರ ಬಂಗಾರಮಕ್ಕಿಯ ಸಂಸ್ಥಾಪಕರಾದ ದಿ|| ವೇ|| ಮೂ|| ಶ್ರೀ ಗಣೇಶ ಭಟ್ಟರ ಸ್ಮರಣಾರ್ಥ ಪ್ರತೀ ವರ್ಷ ಕೊಡಮಾಡುವ “ಯಕ್ಷಾಂಜನೇಯ” ಪ್ರಶಸ್ತಿಗೆ ಪ್ರಸ್ತುತ ಈ ವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರಮನೆ (ರಿ.) ಕಲಾ ತಂಡವನ್ನು ಆಯ್ಕೆಮಾಡಿದ್ದು ಇದರ ಪ್ರತಿನಿಧಿಯಾಗಿ ಶ್ರೀಮತಿ ಗೌರಿ ಶಂಭು ಹೆಗಡೆ ಇವರು ಗೌರವವನ್ನು ಸ್ವಿಕರಿಸಿದರು.
ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರು ವಹಿಸಿದ್ದರು. ಸಾಹಿತಿ ಶ್ರೀ ಅರವಿಂದ ಕರ್ಕಿಕೋಡಿಯವರು ಅಧ್ಯಕ್ಷತೆ ವಹಿಸಿದ್ದರು, ವಿಶೇಷ ಆಹ್ವಾನಿತರಾಗಿ ನ್ಯಾಯವಾದಿ ಶ್ರೀ ನಾಗರಾಜ ನಾಯಕ್ ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು, ಶ್ರೀಕ್ಷೇತ್ರದ ಭಕ್ತಾದಿಗಳು, ಕಲಾವಿದರು, ಕಲಾ ಪ್ರೇಕ್ಷಕರು, ಪ್ರಾಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು.