3,274 total views
ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮ ಪಂಚಾಯತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಂಚಾಯತಿಯ ಅಧ್ಯಕ್ಷ ಹಾಗೂ ಇದಕ್ಕೆ ಸಂಬಂಧಪಟ್ಟ ಅಭಿಯಂತರರನ್ನು ಅಮಾನತು ಮಾಡಿ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಭ್ರಷ್ಟಾಚಾರಿ ಹಟಾವೊ ಪಂಚಾಯತ್ ಬಚಾವೊ ಘೋಷವಾಕ್ಯದೊಂದಿಗೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಪ್ರಾದೇಶಿಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದೆವೇಂದು ತಿಳಿಸಿದರು
ಗಂವ್ಹಾರ ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಕರ ವಸೂಲಿ ಹಾಗೂ ಅಂಗವಿಕಲರ ಸಹಾಯ ದನ ಇವುಗಳಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ ಪಿಡಿಒ ಅಧ್ಯಕ್ಷರು ಮತ್ತು ಅಭಿಯಂತರರು ಈ ಮೂರು ಜನರಲ್ಲಿ ಈಗಾಗಲೇ ಪಿಡಿಓ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಇದಕ್ಕೆ ನಮ್ಮ ಸ್ವಾಗತವಿದೆ ಆದರೆ ಇನ್ನೂ ಇಬ್ಬರಾದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಇದಕ್ಕೆ ಸಂಬಂಧಪಟ್ಟ ಅಭಿಯಂತರರನ್ನು ಶೀಘ್ರದಲ್ಲಿ ಅಮಾನತು ಮಾಡಬೇಕು ಈಗಾಗಲೇ ಈ ಗ್ರಾಮ ಪಂಚಾಯತ ಅವ್ಯವಹಾರದ ದಾಖಲೆಗಳ ಸಮೇತ ಒಂದು ತಿಂಗಳ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ತಾಲೂಕ ಕಿರಿಯ ಅಭಿಯಂತರರಿಗು ದೂರು ಸಲ್ಲಿಸಲಾಗಿದೆ ಆದ್ದರಿಂದ ಇವರಿಬ್ಬರಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು 15 ದಿವಸದ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ. ಭ್ರಷ್ಟಾಚಾರಿ ಹಟವೊ ಪಂಚಾಯತ್ ಬಚಾವೊ ಘೋಷವಾಕ್ಯದೊಂದಿಗೆ ತಾಲೂಕ ಬಂದ್ ಮಾಡಿ ಹೋರಾಟಕ್ಕೆ ಇಳಿಯಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಪಟೇದಾರ್ ಪರಮಾನಂದ ಯಲಗೋಡ ತಿಪ್ಪಣ್ಣ ಜೈನಾಪುರ್ ಸೈಬಣ್ಣ ಪೂಜಾರಿ ಸೇರಿದಂತೆ ಇನ್ನಿತರ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ಜೆಟ್ಟಪ್ಪ ಎಸ್ ಪೂಜಾರಿ