2,341 total views
ಕಾರವಾರ-ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರನ್ನಾಗಿ ಐ. ಎನ್.ಟಿ.ಯು.ಸಿ ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಚ್.ಜಿ.ರಮೇಶ್ ಕುಣಿಗಲ್ ಅವರನ್ನು ಆಯ್ಕೆ ಮಾಡಿ ರಾಜ್ಯಪಾಲರ ಆದೇಶನುಷಾರ ಅವರ ಹೆಸರಿನಲ್ಲಿ ಕಾರ್ಮಿಕ ಇಲಾಖೆಯ ಅಧೀನ ಕಾರ್ಯದರ್ಶಿ ಸುಮ.ಎಸ್ ಅವರು ಎಚ್.ಜಿ.ರಮೇಶ್ ಕುಣಿಗಲ್ ಅವರಿಗೆ ಆದೇಶ ಆಯ್ಜೆ ಪತ್ರ ನೀಡಿದ್ದಾರೆ. ಈ ಅಧಿಕಾರ ಅವಧಿಯು ಆಗಸ್ಟ್ 2024 ರಿಂದ ಮುಂದಿನ 3 ವರ್ಷದ ಅವದಿವರೆಗೆ ಇರುವುದೆಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಕಾರ್ಮಿಕ ಸಚಿವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸಮಿತಿಯ ಅಧ್ಯಕ್ಶರು ಸೇರಿದಂತೆ ಸಮಿತಿಯಲ್ಲಿ ಒಟ್ಟು 15 ಜನ ಸದಸ್ಯರನ್ನು ಒಳಗೊಂಡಿದೆ..ಈ ಸಮಿತಿಗೆ ಅಧಿಕಾರಿ ಸದಸ್ಯರಾಗಿ 5 ಜನ ಐ. ಎ. ಎಸ್/ಐ. ಪಿ.ಎಸ್ ಕೇಟಗರಿಯ ಅಧಿಕಾರಿಗಳು ನೇಮಕ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಶ್ರೀಎಚ್.ಜಿ.ರಮೇಶ್ ಕುಣಿಗಲ್ ಅವರಿಗೆ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಕುಮಾರ.ನಾಯ್ಕ್ ಭಟ್ಕಳ ಅವರು ಶುಭಾಶಯ ತಿಳಿಸಿದ್ದಾರೆ.