3,270 total views
ಕಾಳಗಿ: ಪಟ್ಟಣ ಹಾಗೂ ಹಳ್ಳಿಯಲ್ಲಿ ಉಳುಮೆ ಮಾಡಿ ಬಂದು ರಾತ್ರಿ ನೆಮ್ಮದಿಯಾಗಿರುವ ರೈತರಿಗೆ ಕೆಲವು ತಿಂಗಳಿಂದ ಜಾನುವಾರುಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿದರಿಂದ ರೈತರು ನಿಟ್ಟುಸಿರು ಬಿಟ್ಟು ನೆಮ್ಮದಿಯಾಗಿರಲು ಪೊಲೀಸರು ಯಶಸ್ವಿಯಾಗಿದ್ದಾರೆ.ಕಳ್ಳರಿಂದ ಹಣ ಹಾಗೂ ಬೊಲೆರೊ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ನ ವರಿಷ್ಠಾಧಿಕಾರಿ ಎ ಶ್ರೀನಿವಾಸಲು ತಿಳಿಸಿದ್ದಾರೆ. ಕಲಬುರಗಿ ರಾಮಜೀ ನಗರದ ಅಮೀರ ಖುರೇಶಿ,ಮತ್ತು ನೋಮಾನ ಶೇಖ್ ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳವಾರ ನಸುಕಿನ ಜಾವ ಜಾನುವಾರ ಆರೋಪಿ ಪತ್ತೆ ಕಾರ್ಯದಲ್ಲಿದಾಗ ತಾಲೂಕಿನ ಚಿಂಚೋಳ್ಳಿ (ಎಚ್ )ಕ್ರಾಸ್ ಹತ್ತಿರ ನಿಂತಾಗ, ಆ ಸಮಯಕ್ಕೆ ಹೆಬ್ಬಾಳ ಕಡೆಯಿಂದ ಗೂಡ್ಸಬುಲೆರೋ ವಾಹನ ಬಂದಿದ್ದು. ಬುಲೆರೋ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ, ಅದರಲ್ಲಿದ್ದ ವಾಹನ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಿ ವಾಹನ ಪರಿಶೀಲಿಸಿ ನೋಡಿದಾಗ. ವಾಹನದಲ್ಲಿ 4 ಹಗ್ಗ ಹಾಗೂ ಜಾನುವಾರುಗಳ ಬಾಯಿಗೆ ಹಾಕುವ 4 ಚುಕ್ಕಾ ಸಿಕ್ಕಿದ್ದವು. ಆರೋಪಿಗಳಿಗೆ ಹೆಚ್ಚಿನ ವಿಚಾರಣೆ ಮಾಡಿದಾಗ ಜಾನುವಾರು ಕಳ್ಕತನ ಮಾಡಿದ ಬಗ್ಗೆ ಒಪ್ಪಿಕೊಂಡರು. ಬಂಧಿತರಿಂದ ₹ 1.ಲಕ್ಷ ಮುದ್ದೆಮಾಲನ್ನು ಹಾಗೂ ಕೃತ್ಯಕ್ಕೆ ಬಳಸಿದ ಮಹೇಂದ್ರ ಪೀಕಪ್ ಬುಲೆರೋ ವಾಹನ ಸುಮಾರು ₹4.50 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎರಡು ತಿಂಗಳಿಂದ ತಾಲೂಕಿನ ಹಲವೆಡೆ ಮನೆ ಮುಂದೆ ಕಟ್ಟಲಾಗಿದ್ದ ಜಾನುವಾರುಗಳ ಕಳ್ಳತನ ಹೆಚ್ಚಾಗಿತ್ತು. ಇದು ಪೊಲೀಸರಿಗೂ ತಲೆ ದೊಡ್ಡ ನೋವಾಗಿತ್ತು. ಕಳ್ಳತನವಾಗಿರೋ ಉಳಿದ ಜಾನುವಾರುಗಳ ಪತ್ತೆ ಹಚ್ಚಿ ಸಂಬಂಧಿಸಿದರವರಿಗೆ ಮರಳಿಸೋದಾಗಿ ಹೇಳಿದರು.ಶಹಬಾದ ಡಿವೈಎಸ್ ಪಿ ಶಂಕರಗೌಡ ಪಾಟೀಲ, ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ ಐ ಗಳಾದ ತಿಮ್ಮಯ್ಯ ಬಿ ಕೆ, ಶಾಮರಾವ, ತಿರುಮಲೇಶ ಸೇರಿದಂತೆ ಅನೇಕ ಪೊಲೀಸ್ ಸಿಬ್ಬಂದಿ ಸಂಗಮೇಶ, ಅಂಬರೀಶ್,ಮಂಜುನಾಥ,ಬಸಪ್ಪ ನಾಗೂರ ಮತ್ತು ಇತರರು ಇದ್ದರು.