2,607 total views
ಕಾರವಾರ: ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಹಿನ್ನಲೆಯಲ್ಲಿ ರಾಜ್ಯಾದಂತ ಅರಣ್ಯವಾಸಿಗಳು ನ.೭ ಗುರುವಾರ ರಂದು ಬೃಹತ್ ಅರಣ್ಯವಾಸಿಗಳ ಬೆಂಗಳೂರು ಚಲೋ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಅ.೧ ರಂದು ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಪ್ರಮುಖ ಮುಖಂಡರಿಗೆ ಗ್ರೀನ ಕಾರ್ಡ ವಿತರಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ರಾಜ್ಯ ಸರ್ಕಾರವು ಈಗಾಗಲೇ ಕರಡು ಕಸ್ತೂರಿರಂಗನ್ ವರದಿ ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಇರುತ್ತದೆ. ಅಂತಿಮ ವರದಿ ಅನುಷ್ಠಾನ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕಾಗಿರುವುದರಿಂದ ರಾಜ್ಯಾದಂತ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಹಿನ್ನಲೆಯಲ್ಲಿ ಹಾಗೂ ಅರಣ್ಯವಾಸಿಗಳ ಭೂಮಿ ಹಕ್ಕು ಆಗ್ರಹಿಸಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧಾರಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ, ಜಿಲ್ಲಾ ಸಂಚಾಲಕರಾದ ನೆಹರು ನಾಯ್ಕ ಬಿಳೂರು, ನಾಗರಾಜ ಎಸ್ ದೇವಸ್ಥಳ ಅಚನಳ್ಳಿ, ರಾಜು ನರೇಬೈಲ್, ಇಬ್ರಾಹೀಂ ಗೌಡಳ್ಳಿ, ಎಮ್.ಆರ್. ನಾಯ್ಕ ಕಂಡ್ರಾಜಿ, ಶಿವನಂದಾ ಪೂಜಾರಿ ಜಡ್ಡಿಗದ್ದೆ, ಗಂಗೂ ಬಾಯಿ ರಜಪೂತ, ಕಮಲಾ ಬಾಯಿ ಸಂಗೂ, ಸಾವಿತ್ರಿ ಎಳಿಗೇರ್, ನಜೀರ ಶೇಖ, ಸಪ್ರೀಂ ಶೇಖ, ರಾಜು ಗೌಡ ಅಲಕೋಡ ಮುಂತಾದವರು ಸಭೆಯಲ್ಲಿ ಮಾತನಾಡಿದ್ದರು. ಕಿರಣ ಮರಾಠಿ ದೇವನಳ್ಳಿ ಸಭೆಯಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ತೀವ್ರ ವಿರೋಧಕ್ಕೆ ತೀರ್ಮಾನ:
ಅವೈಜ್ಞಾನಿಕ ವರದಿ ಸಂಪೂರ್ಣ ತಿರಸ್ಕರಿಸಲು ಹಾಗೂ ಕೇಂದ್ರ ಸರ್ಕಾರ ವರದಿಯನ್ನ ಅಂಗೀಕರಿಸಿದAತೆ ತೀವ್ರತರದ ಹೋರಾಟ ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.