2,589 total views
ನಮ್ಮ ಪಂಚಾಯಿತಿ ಸಿಬ್ಬಂದಿಗಳ ಕರ್ತವ್ಯಕ್ಕೆ ಸಿಕ್ಕ ಗೌರವ: ಮಲ್ಲಣ್ಣ ಹೊಸ್ಮನಿ ಈ ಪುರಸ್ಕಾರ ಇನ್ನು ಜವಾಬ್ದಾರಿ ಹೆಚ್ಚು ಮಾಡಿದೆ: ಆನಂದಕುಮಾರ ಎಸ್ ದೊಡ್ಡಮನಿ
ಯಡ್ರಾಮಿ:ತಾಲೂಕಿನ ಸಾಥಖೇಡ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಒಳ್ಳೆ ಕಾರ್ಯಗಳು ಮಾಡಿ ಸರ್ಕಾರದ ಅಧಿಕಾರಿಗಳ ಗಮನ ಸೆಳೆದಂತ ಪಂಚಾಯಿತಿ ಆಗಿದೆ. ಅದಕ್ಕಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದು ಅತ್ಯಂತ ಹೆಮ್ಮೆಯ ವಿಷಯ ಎಂದು ಪಂಚಾಯಿತಿ ಅಧ್ಯಕ್ಷ ಮಲ್ಲಣ್ಣ ಹೊಸಮನಿ ತಿಳಿಸಿದ್ದಾರೆ.ಗಾಂಧಿ ಪುರಸ್ಕಾರದ ಜೊತೆ 5 ಲಕ್ಷ ಬಹುಮಾನ ಪಡೆದಿರುವುದು ನಮ್ಮ ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.ಯಡ್ರಾಮಿ ತಾಲೂಕಿನಲ್ಲಿ ಅತ್ಯಂತ ಉತ್ತಮ ಮಟ್ಟದ ಕಾಮಗಾರಿಗಳು ಮಾಡಿ ಜನರ ಸಮಸ್ಯೆಯನ್ನು ಬಗೆಹರಿಸಿದ್ದಕ್ಕಾಗಿ ಸರ್ಕಾರ ನಮ್ಮ ಕಾರ್ಯಗಳಿಗೆ ಮೆಚ್ಚಿ ಗಾಂಧಿ ಪುರಸ್ಕಾರ ನೀಡಿರುವುದು ನಮಗೆ ಸಂತಸ ತಂದಿದೆ ಎಂದು ಆನಂದ ಕುಮಾರ್ ಎಸ್ ದೊಡ್ಡಮನಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸೌಲಭ್ಯ ಹಾಗೂ ಇನ್ನಿತರ ಸಾರ್ವಜನಿಕ ಸೇವೆಗಳನ್ನು ಅಚ್ಚುಕಟ್ಟಾಗಿ ಒದಗಿಸಿದ್ದೇವೆ. ಈ ಪುರಸ್ಕಾರಕ್ಕೆ ಕಾರಣಕರ್ತರಾದ ಗ್ರಾಮ ಪಂಚಾಯಿತಿಯ ಎಲ್ಲಾ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಆನಂದ ಕುಮಾರ್ ಎಸ್ ದೊಡ್ಮನಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಳಿದರು.
ಗ್ರಾಮಗಳಿಗೆ ರಸ್ತೆ ನಿರ್ಮಾಣ ಆಗಲಿ ಕಾಲುವೆಗಳು ಊಳೆತ್ತುವುದಾಗಲಿ ಸಾರ್ವಜನಿಕರಿಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ನೀಡಿರುವುದರಿಂದ ಹಾಗೂ ಸಾರ್ವಜನಿಕರ ಸಮಸ್ಯೆಗಳು ಕೂಡಲೇ ಸ್ಪಂದಿಸಿ ಪರಿಹಾರ ನೀಡಿದ್ದಕ್ಕಾಗಿ ಈ ಪುರಸ್ಕಾರ ದೊರೆತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.ಒಟ್ಟಿನಲ್ಲಿ ಯಡ್ರಮಿ ತಾಲೂಕಿನಲ್ಲಿ ನಮ್ಮ ಪಂಚಾಯಿತಿ ಒಂದೇ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದದ್ದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ