2,584 total views
ಹರಿಶ್ಚಂದ್ರ ಪುರ ಅಂಗನವಾಡಿ ಕೇಂದ್ರ ಕೊಡಗು ಜಿಲ್ಲೆ ಗೋಣಿಕೊಪ್ಪ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೊನ್ನಂ ಪೇಟೆ ,ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಪೋಶನ್ ಮಸಾ ಚರಣೆಯನ್ನು ಆಚರಿಸಲಾಯಿತು ಸುಪೋಷಿತ ಕಿಶೋರಿ ಸಶಕ್ತನಾರಿ ಎಂಬ ಘೋಷವಾಕ್ಯದಂತೆ ಇಂದಿನ ಕಾರ್ಯಕ್ರಮವನ್ನು ನಡೆಸಲಾಯಿತು.ಈ ದಿನ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಪೋಷಣ ಅಭಿಯಾನ ಕೋ ಆರ್ಡಿನೇಟರ್ ಅವರು ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಜಿಲ್ಲಾ ಸಂಜೀವಿನಿ ಸಂಪನ್ಮೂಲ ಅಧಿಕಾರಿ ಅವರು ಆರೋಗ್ಯ ಇಲಾಖೆಯವರು, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು 15 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನ ಪ್ರಶಾನ ಕಾರ್ಯಕ್ರಮ, ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಮಾಡಲಾಯಿತು. ಇಂದಿನ ಕಾರ್ಯಕ್ರಮದಲ್ಲಿ ಆರೋಗ್ಯ ಚುಚ್ಚುಮದ್ದು, ಪೋಷಕ ಯುಕ್ತ ಆಹಾರ ಪದಾರ್ಥಗಳು ಹಾಗೂ ಗ್ರಾಮ ನೈರ್ಮಲ್ಯ ಸ್ವಚ್ಛತೆ ಬಗ್ಗೆ ವಿವರವಾದ ಮಾಹಿತಿಗಳನ್ನು ಅಧಿಕಾರಿಯವರು ನೀಡಿದರು..