2,603 total views
ಕಲ್ಬುರ್ಗಿ ಸುದ್ದಿ
ಕರ್ನಾಟಕ ರಾಜ್ಯದ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ವತಿಯಿಂದ 2022/23ನೇಯ ಸಾಲಿನ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಇದುವರೆಗೆ ಅನುದಾನ ಮಂಜೂರು ಆಗದಿರುವದಕ್ಕೆ.ವಾಲ್ಮೀಕಿ ನಿಗಮ ಮಂಡಳಿಯ ನಿರ್ದೇಶಕರ ಹಾಗೂ ವ್ಯವಸ್ಥಾಪಕರ ವಿರುದ್ಧ ರಾಷ್ಟ್ರೀಯ ಅಹಿಂದ ಸಂಘಟನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹಾಂತಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಷ್ಟು ವರ್ಷಗಳಾದರೂ ವಾಲ್ಮೀಕಿ ನಿಗಮ ಮಂಡಳಿಯ 2022/23ನೇಯ ಸಾಲಿನ ಅನುದಾನ ಎಲ್ಲಿ ಹೋಯಿತು? ಎಂಬುವದೇ ಗೊತ್ತಾಗುತ್ತಿಲ್ಲ! ಬೆಂಗಳೂರು ನಗರದ ವಾಲ್ಮೀಕಿ ನಿಗಮ ಮಂಡಳಿಯ ನಿರ್ದೇಶಕರೆ ಹಾಗೂ ವ್ಯವಸ್ಥಾಪಕರೆ ಕೂಡಲೆ ನಿಜವಾದ ಫಲಾನುಭವಿಗಳ ಅನುದಾನವನ್ನು ಬಿಡುಗಡೆ ಮಾಡಿ ಇಲ್ಲದಿದ್ದರೆ ಅನ್ಯಾಯ ಕೊಳಗಾದ ಫಲಾನುಭವಿಗಳ ಜೊತೆ ಸೇರಿ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ಹಾಗೂ ರಾಷ್ಟ್ರೀಯ ಅಹಿಂದ ಸಂಘಟನೆಯ ಕಾರ್ಯಕರ್ತರೊಂದಿಗೆ ವಾಲ್ಮೀಕಿ ನಿಗಮ ಮಂಡಳಿಯ ಮುಖ್ಯ ಕಚೇರಿಗೆ ಮುತ್ತಿಗೆಯನ್ನು ಹಾಕಿ ಕಚೇರಿಗೆ ಬೀಗ ಜಡೆದು ಉಗ್ರವಾದ ಹೋರಾಟ ಮಾಡಲಾಗುವದೆಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಮಹಂತ್ ಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ. ಪರಿಶಿಷ್ಟ ಪಂಗಡಗಳ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ
ವರದಿ ಜಟ್ಟಪ್ಪ ಎಸ್ ಪೂಜಾರಿ