2,384 total views
ಪ್ರಗತಿ ಸೇವಾ ಟ್ರಸ್ಟ್ ( ರಿ) ಪಾಂಡವಪುರ ಮತ್ತು ಸವಿ ನೆನಪು ಫೌಂಡೇಷನ್ ಮೈಸೂರು ಇವರ ಸಹಯೋಗದಲ್ಲಿ ರಾಗಿಮುದ್ದನಹಳ್ಳಿಯ ಪ್ರತಿಮಾ ನಿಲಯದಲ್ಲಿ ಶ್ರೀಮತಿ ಪ್ರತಿಮಾ ನಾಗೇಶ್ ರವರ 6 ನೇ ವರ್ಷದ ಸಂಸ್ಮರಣೆ ಅಂಗವಾಗಿ ಸ್ಪೂರ್ತಿ ದಿನ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ನ ಅಧ್ಯಕ್ಷ ಡಾ.ನಾಗೇಶ್ ರಾಗಿಮುದ್ದನಹಳ್ಳಿ ಮಾತನಾಡಿ ಸಮಾಜ ಸೇವೆ ಮಾಡಲು ನನ್ನ ಪತ್ನಿಯೇ ಸ್ಪೂರ್ತಿ , ಆದ್ದರಿಂದ ಆಕೆಯ ಸಾಮಾಜಿಕ ಕಳಕಳಿಯಿಂದಾಗಿ ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ ಎಂದರು. ಈ ದಿನ ಹಾಸನದ ಹೆಸರಾಂತ ಲೇಖಕಿ,ಸಾಹಿತಿ, ಸ್ಥಾಪಕ ಅಧ್ಯಕ್ಷರು “ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ.ದ ಶ್ರೀಮತಿ ಹೆಚ್.ಎಸ್.ಪ್ರತಿಮಾಹಾಸನ್ ರವರ ‘ಭಾವನೆಗಳ ಪ್ರತಿರೂಪ’
ಸಮಾಜದ ಮುಖಭಾವಗಳ ಪ್ರತಿರೂಪ ಕೃತಿ ಕುರಿತು ಮಾತನಾಡಿ ಮನೋಜ್ಞವಾದ ವಿಭಿನ್ನ ಲೇಖನಗಳ ಉತ್ತಮ ಗ್ರಂಥವಾಗಿದೆ ನೈತಿಕತೆಯನ್ನು ಬಿಂಬಿಸುವ ಕಣಜವಾಗಿದೆ ಎಂದು ಹೇಳುತ್ತಾ ಮಕ್ಕಳನ್ನೆ ಆಸ್ತಿ ಮಾಡಿ ಮತ್ತು ಸಂಸ್ಕಾರ ಕಲಿಸಿ ಎಂದು ಕರೆಕೊಟ್ಟರು. ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ.ರಾ.ಮು.ವಿವಿಯ ಸಹ ಪ್ರಾಧ್ಯಾಪಕಿ ಡಾ.ಆರ್.ಹೆಚ್.ಪವಿತ್ರ ಮಾತನಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರಾತಿನಿದ್ಯತೆ ಕೊಡಲು ತಿಳಿಸಿದರು. ಸರ್ವರನ್ನು ಗೌರವಿಸುವ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದರು. ಕೃತಿ ಬಿಡುಗಡೆ ಮಾಡಿದ ಡಾ.ಸಿ.ಎ ಅರವಿಂದ್ ಮತ್ತು ಚಿಗುರು ಆಶ್ರಮದ ಶ್ರೀಮತಿ ಸುಷ್ಮರವಿಕುಮಾರ್ ಮಾತನಾಡಿ ಸಮಾಜಮುಖಿಯಾಗಿ ಸಾಮರಸ್ಯದಿಂದ ಬಾಳಬೇಕು ಮತ್ತು ಇಂತಹ ಮೌಲ್ಯಯುತ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮ ನಿರೂಪಿಸಿ ಕೃತಿ ಕುರಿತು ಮಾತನಾಡಿದ ಡಾ.ವಿಜಯಕುಮಾರ್ ಬಲ್ಲೇನಹಳ್ಳಿ ಮಾತನಾಡಿ ಪ್ರಗತಿ ಸೇವಾ ಟ್ರಸ್ಟ್ ನ ಕಾರ್ಯಕ್ರಮಗಳು ಶ್ಲಾಘನೀಯ ಮತ್ತು ಮೌಲ್ಯಾಧಾರಿತವಾದವು.ಶಿಕ್ಷಕಿ, ಪತ್ರಕರ್ತೆ, ಸಮಾಜ ಸೇವಕಿ, ಸಂಘಟನಾ ಚತುರೆ 300 ಕ್ಕೂ ಹೆಚ್ಚು ಲೇಖನಗಳ ಮೂಲಕ ಮನೆಮಾತಾಗಿರುವ ಶ್ರೀಮತಿ ಹೆಚ್.ಎಸ್ ಪ್ರತಿಮಾಹಾಸನ್ ರವರ 8 ಕೃತಿ ಇಂದು ಲೋಕರ್ಪಣೆಗೊಂಡಿದೆ. ಇವರ 5 ನೇ ಲೇಖನಗಳ ಕೃತಿಯಾಗಿರುವ ಈ ಕೃತಿಯು ವೈವಿಧ್ಯಮಯ ವಸ್ತು ವಿಷಯಗಳನ್ನು ಒಳಗೊಂಡಿದೆ. ಪ್ರೀತಿ, ಪ್ರೇಮ, ಅನುಕಂಪ, ಆಧ್ಯಾತ್ಮ,ಸ್ತ್ರೀಯರ ಸಂವೇದನೆ, ದೇಶಿಯಾ ಸಂಸ್ಕೃತಿ ನಾಶ, ಸಮಯದ ಮಹತ್ತ್ವ ಹೀಗೆ ವಿಭಿನ್ನ ವಿಷಯಗಳನ್ನು ಒಳಗೊಂಡಿದೆ. ಹಲವು ಭಾವನಾತ್ಮಕ ವಸ್ತು ವಿಷಯಗಳನ್ನು ಒಳಗೊಂಡು ರಚನೆಯಾದ ಕೃತಿ ದಿನ ನಿತ್ಯದ ಯೋಗ, ಕಾಯಕವೇ ಕೈಲಾಸ, ಪೆನ್ ಡ್ರೈವ್, ಪ್ರಕೃತಿ ಎಂಬ ತಾಯಿ, ರಾಸಾಯನಿಕ ಮುಕ್ತ ಕೃಷಿ, ದೇಹ ಪರಿವರ್ತನೆ, ಮತದಾನ ಪ್ರತಿಯೊಬ್ಬರ ಹಕ್ಕು, ಹೊಂದಾಣಿಕೆಯೇ ಜೀವನ ಹೀಗೆ ವಿಭಿನ್ನ ಶೀರ್ಷಿಕೆಯ ಲೇಖನಗಳು ಪ್ರಸ್ತುತ ಸಮಾಜದ ನೈಜ ಘಟನೆಗಳನ್ನು ಪ್ರತಿಧ್ವನಿಸಿ ಉತ್ತಮ ಸಮಾಜದ ರಚನೆಗೆ ಸಂದೇಶವನ್ನು ನೀಡುವಂತಿವೆ. ಕೃತಿ ನಿರಂತರ ಓದುವಿಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೃತಿ ಕರ್ತೃ ಶ್ರೀಮತಿ ಹೆಚ್.ಎಸ್.ಪ್ರತಿಮಾ ಹಾಸನ್ ಮಾತನಾಡಿ ತಮ್ಮ ಸಾಹಿತ್ಯದ ಅಭಿರುಚಿ ಮತ್ತು ಪುಸ್ತಕ ರಚನೆಯ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಬರೆವಣಿಗೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಪ್ರಕಾರದ ಕೃತಿಗಳ ರಚನೆ ಮತ್ತು ಮಹಾ ಕಾವ್ಯದಂತಹ ರಚನೆಗೆ ಪ್ರಯತ್ನಿಸಿವುದಾಗಿ ತಿಳಿಸಿದರು.ವೇದಿಕೆಯಲ್ಲಿ ಜೆ.ಗಜೇಂದ್ರ, ಅನಂತನಾರಾಯಣ, ವೆಂಕಟೇಶ್ , ಮೇಣಾಗ್ರ ಪ್ರಕಾಶ್ ,ಸೌಭಾಗ್ಯವತಿ,ಡೋಲೋ 650 ಯ ಶಶಿರೇಖಾರಾಜು ಉಪಸ್ಥಿತರಿದ್ದರು.ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಡಾ.ಆರ್ ಹೆಚ್.ಪವಿತ್ರ, ಡಾ.ಪ್ರಮೀಳ, ಹೆಚ್.ಎಸ್.ಪ್ರತಿಮಾ ಹಾಸನ್, ಪುಷ್ಪಲತಾ, ಅನಿತಾ, ಶ್ವೇತಾ, ತೇಜಸ್ವಿ ಜ್ಯೋತಿ ಅವರುಗಳನ್ನು ಸನ್ಮಾನಿಸಲಾಯಿತು.