2,383 total views
ಜೇವರ್ಗಿ ತಾಲೂಕಿನ ಚಿಕ್ ಮುದುವಾಳ ಮಾರ್ಗವಾಗಿ ಬಿಳವಾರ ಬಳಬಟ್ಟಿ ಶಿವಪೂರ ಚಾಮನಾಳ ಮಾರ್ಗವಾಗಿ ಕೆಂಭಾವಿ ಮಾರ್ಗದ ಮುಖಾಂತರ ತಾಳಿಕೋಟಿ ಮುದ್ದೆಬಿಹಾಳ ಪಟ್ಟಣಕ್ಕೆ ಸುಮಾರು 2003ರಿಂದ2011 ರವರಿಗೆ ಈ ಮಾರ್ಗದ ಮುಖಾಂತರವಾಗಿ ಬಸ್ಸಿನ ಸೌಲಭ್ಯವಿತ್ತು ಏಕಾಏಕಿ ಈ ಮಾರ್ಗದ ಬಸ್ ಸಂಚಾರ ಸ್ಥಕಿತಗೊಳಿಸಲಾಗಿದ್ದು ಇದರಿಂದ ಈ ಮಾರ್ಗದ ಮುಖಾಂತರವಾಗಿ ಸಂಚರಿಸುವ ನೂರಾರು ಪ್ರಯಾಣಿಕರಿಗೆ ಸಕಾಲಕ್ಕೆ ವಾಹನ ಸೌಲಭ್ಯದ ಕೊರತೆಯಿಂದ ಪ್ರಯಾಣಿಕರು ಪರಿತಪಿಸುವಂತಾಗಿದೆ ಈ ಕೂಡಲೇ ಜೆವರ್ಗಿ ತಾಲೂಕಿನ ಸಾರಿಗೆ ವ್ಯವಸ್ಥಾಪಕರು ಈ ಮಾರ್ಗದ ಮುಖಾಂತರ ಬಸ್ಸಿನ ಸೌಕರ್ಯವನ್ನು ಒದಗಿಸಿಕೊಡಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನಾ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಶಿವಶಂಕರ್ ಗುಂಡಗುರ್ತಿ ಬಳಬಟ್ಟಿ ಅವರು ಜೇವರ್ಗಿ ತಾಲೂಕಿನ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕಾ ಮನವಿ ಮಾಡಿದ್ದಾರೆ ಈ ವಿಷಯದ ಕುರಿತು ಅಧಿಕಾರಿಗಳು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಜೇವರ್ಗಿ ತಾಲೂಕ ಸಾರಿಗೆ ಇಲಾಖೆಯ ಕಚೇರಿಗೆ ಮುತ್ತಿಗೆಯನ್ನು ಹಾಕಿ ಅಹಿಂದ ಸಂಘಟನಾ ವತಿಯಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಶಿವಶಂಕರ್ ಗುಂಡುಗುರ್ತಿ ಬಳಬಟ್ಟಿಯವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ