2,577 total views
ಹೊನ್ನಾವರ :- ದಿನಾಂಕ 25/09/2024 ರಂದು ಹೈದರಾಬಾದ್ನ ಮಲಕಪೇಟ್ನಲ್ಲಿ ನಡೆದ CISCE National Games & Sports ಕ್ರೀಡಾಕೂಟದಲ್ಲಿ ಕರ್ನಾಟಕದ 14 ವರ್ಷದೊಳಗಿನ ಬಾಲಕಿಯರ 4×100 ರಿಲೇ ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟು ದ್ವಿತೀಯ ಬಹುಮಾನವನ್ನು ಗಳಿಸಿತು, ಪ್ರಥಮ ಸ್ಥಾನವನ್ನು ಮಹಾರಾಷ್ಟ್ರ ಪಡೆದುಕೊಂಡಿತು.
ಕರ್ನಾಟಕ 14 ವರ್ಷದೊಳಗಿನ ಬಾಲಕಿಯರ 4×100 ರಿಲೇ ತಂಡದಲ್ಲಿ ಹೊನ್ನಾವರ ತಾಲೂಕಿನ ಬೇರೊಳ್ಳಿಯ ಕು. ಜೆನಿಶಾ ನವೀನ್ ಫೆರ್ನಾಂಡಿಸ್ ಸ್ಥಾನ ಪಡೆದುಕೊಂಡಿದ್ದು, ಇವಳು ಚಿಕ್ಕೋಡಿಯ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕಳೆದ ಆಗಸ್ಟ್ 16 ರಿಂದ 18 ರವರೆಗೆ ವಿದ್ಯಾನಗರ, ಬೆಂಗಳೂರಿನ ಕ್ರೀಡಾ ಶಾಲೆ, ಜಯಪ್ರಕಾಶ್ ನಾರಾಯಣ ಯುವ ತರಬೇತಿ ಕೇಂದ್ರದಲ್ಲಿ ನಡೆದ CISCE ಶಾಲೆಗಳ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀ ಮತ್ತು 400 ಮೀ ಓಟದಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದು, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಳು. ಈಗ, ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಉತ್ತಮ ಸಾಧನೆ ಮಾಡಿರುವುದು ಊರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದೆ.
ಮಗಳ ಈ ಸಾಧನೆಯಿಂದ ಪೋಷಕರು ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ನಡೆಯುವ “ಖೆಲೋ ಇಂಡಿಯಾ” ಕ್ರೀಡಾಕೂಟಕ್ಕೆ ನಿರೀಕ್ಷೆಯಲ್ಲಿದ್ದು, ಅಲ್ಲಿಂದ ಆಕೆ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲಿ ಎಂಬ ಆಶಯವನ್ನು ಪೋಷಕರು ಶಾಲಾ ಮಂಡಳಿ ಹಾಗೂ ಊರಿನ ನಾಗರಿಕರು ಹೊಂದಿದ್ದಾರೆ.
ವರದಿ :-ನೀಲನ್ ಮಿರಂದ