40 total views
ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮಜಿ ಪೌಂಡೇಶನ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಪ್ರತಿದಿನ ಪೌಷ್ಠಿಕ ಆಹಾರಗಳಾದ ಮೊಟ್ಟೆ , ಶೇಂಗಾಚಿಕ್ಕಿ ಮತ್ತು ಬಾಳೆಹಣ್ಣು ವಾರದ ಆರೂ ದಿವಸ ವಿತರಿಸುವ ಕಾರ್ಯಕ್ರಮ ಆರಂಭವಾಯಿತು . ಎಸ್ ಡಿ ಎಮ್ ಸಿ ಸದಸ್ಯರು ಶಾಲೆಯ ಶ್ರೀ ಲಕ್ಷ್ಮೀ ದೇವರ ಪೋಟೋಗೆ ಪೂಜೇ ಸಲ್ಲಿಸಿದರು ನಂತರ ಮಕ್ಕಳಿಗೆ ಪ್ರಧಾನ ಗುರುಗಳು ಅಡುಗೆ ಸಹಾಯಕರ ಸಹಾಯದೊಂದಿಗೆ ಮೊಟ್ಟೆ , ಶೇಂಗಾಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳು ಮಾತನಾಡಿ ಮಕ್ಕಳು ಸರ್ಕಾರ ಮತ್ತು ಅಜೀಂ ಪ್ರೇಮಜಿ ಪೌಂಡೇಶನ ನೀಡುತ್ತಿರುವ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಮಕ್ಕಳು ಪ್ರತಿದಿನ ಶಾಲೆಗೆ ತಪ್ಪದೇ ಬರಬೇಕು. ಶಾಲೆಯ ಹಾಜರಾತಿ ಹೆಚ್ಚಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಗಳು ಎಸ್ ಆರ್ ಅಂಬ್ಲಿಮಠ , ಗುರುಮಾತೆಯರಾದ ಎಸ್ ಬಿ ರಜಪೂತ , ಗುರುಗಳಾದ ಎಸ್. ಎಮ್. ಪಾಟೀಲ , ಎಮ್ ಎಚ್ ತಳವಾರ , ಎಮ್ ಆರ್ ಕೆಂಚನಗೌಡರ , ಎಮ್ ಎ ಕೊಳಚಿ , ಎಮ್ ಡಿ ಮಾದರ , ಎಸ್ ಡಿ ಎಮ್. ಸಿ. ಸದಸ್ಯರಾದ ಬಸವರಾಜ ಶಹಾಪೂರಮಠ , ಶ್ರೀಮತಿ ದ್ರಾಕ್ಷಾಯಣಿ ಮಾ ಕಲ್ಲೋಳಿ , ವೆಂಕಟೇಶ ದಾಸರ ಮತ್ತು ಅಡುಗೆಯ ಸಹಾಯಕರು ಉಪಸ್ಥಿತರಿದ್ದರು