2,627 total views
ಕಲಬುರಗಿ:- ನಾಡಿನ ನೆಲ ಜಲ ಪ್ರೀತಿಸುವ ಸಂಸ್ಕೃತಿ ನಮ್ಮ ಮಾತೃ ಭಾಷೆಯಲ್ಲಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಗರದ ಕನ್ನಡ ಭವನದಲ್ಲಿ ರವಿವಾರ ಏರ್ಪಡಿಸಿದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆದರೆ ಇತ್ತೀಚೆಗೆ ಸಂಸ್ಕೃತಿ ಪರಂಪರೆಗಳು ಮರೆಯಾಗುತ್ತಿವೆ. ಇದನ್ನು ಸಾಹಿತ್ಯ ಓದುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ. ಈ ಭಾಗದ ನೆಲದಲ್ಲಿ ಭಾಷೆಯ ಸೊಗಡಿದೆ., ಅಂತ:ಸತ್ವವಿದೆ. ಹಾಗೂ ಈ ಸೊಗಡಿನಲ್ಲಿ ಮೃದುತ್ವವಿದ್ದು, ನಡೆ ನುಡಿಯಲ್ಲಿ ಜೀವನ ಸಾಹಿತ್ಯ ಕಾಣುತ್ತೇವೆ. ಹೀಗಾಗಿ ನಾನು ಕಲಬುರಗಿ ಮಗಳಾಗಿ ಬೆಳೆದಿರುವುದು ಹೆಮ್ಮೆ ಅನಿಸುತ್ತಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನೈತಿಕ ಮೌಲ್ಯಗಳನ್ನು ಮುಗ್ಧ ಮಕ್ಕಳ ಮನದಲ್ಲಿ ಅಕ್ಷರವ ಬಿತ್ತಿ, ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ ಸುಂದರ ನಾಡನ್ನು ಕಟ್ಟುವ ಶಿಲ್ಪಿಗಳು ಶಿಕ್ಷಕರಾಗಿದ್ದಾರೆ. ಜಗತ್ತನ್ನು ಬದಲಾಯಿಸುವ ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಆಯುಧವೆಂದರೆ ಶಿಕ್ಷಣ. ಇಡೀ ಪ್ರಪಂಚದಲ್ಲಿ ಶಿಕ್ಷಕರು ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ಸಮೂಹವಾಗಿದೆ. ಆದ್ದರಿಂದಲೇ ಶಿಕ್ಷಕರು ಜಗತ್ತಿನಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಪರಿಷತ್ತು ಶಿಕ್ಷಕರಲ್ಲಿನ ವಿಶೇಷ ಪ್ರತಿಭೆಯನ್ನು ಗುರುತಿಸುವ ದಿಸೆಯಲ್ಲಿ ವಿಶೇಷ ಸಮ್ಮೇಳನಗಳನ್ನು ರೂಪಿಸಲಾಗುತ್ತಿದೆ ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಸಂಸ್ಕಾರಯುತ ಸಮಾಜ ಕಟ್ಟುವಲ್ಲಿ ಮತ್ತು ಸಮಾಜ ಪರಿವರ್ತನೆ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ನಮ್ಮ ನೈತಿಕ ಜೀವನದ ದಾರಿ ಕಂಡು ಹಿಡಿಯುವ ಶಕ್ತಿ ಶಿಕ್ಷಕರಲ್ಲಿದೆ. ಅಂಥ ಶಿಕ್ಷಕರನ್ನು ಸಮಾಜದ ಸದಾ ಸ್ಮರಿಸಿ ಗೌರವಿಸುತ್ತದೆ ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಪತ್ರಕರ್ತರು ಮತ್ತು ಶಿಕ್ಷಕರು ಬಹುತೇಕವಾಗಿ ಶಿಕ್ಷಕರಾಗಿದ್ದಾರೆ. ಈರ್ವರ ಮೇಲೆ ನಾಡಿನ ಭವಿಷ್ಯ ಅಡಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಡಿಡಿಪಿಐ ಸೂರ್ಯಕಾಂತ ಮದಾನೆ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪರಮೇಶ್ವರ ದೇಸಾಯಿ ಮಾತನಾಡಿದರು. ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ರಮೇಶ ಡಿ ಬಡಿಗೇರ, ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ಗುರುಬಸಪ್ಪ ಸಜ್ಜನಶೆಟ್ಟಿ, ಎಸ್ ಕೆ ಬಿರಾದಾರ, ಜ್ಯೋತಿ ಕೋಟನೂರ. ನಾಗಪ್ಪ ಸಜ್ಜನ್, ಸುರೇಶ ಬಡಿಗೇರ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೃತ್ತಿಯ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜೇಂದ್ರ ರಂಗದಾಳ, ಅನೀತಾ ಬಡಿಗೇರ, ಅನುಪಮಾ ಅಪಗೊಂಡ, ರಾಜಶ್ರೀ ಕುಲಕರ್ಣಿ, ಶ್ರೀಶೈಲ್ ಮಾಳಗೆ, ಕೆ.ಶಂಕ್ರೆಪ್ಪ, ಗುರುದೇವಿ ಪಾಟೀಲ, ಮಲ್ಲಿಕಾರ್ಜುನ ಹೊಸಮನಿ, ಗಂಗೋತ್ರಿ ಸಜ್ಜನ್, ಮಾಳಕ್ಕೆ ನಾಗಲಗಾಂವ, ಲಲಿತಾ ಮ್ಯಾಕೇರಿ, ಡಾ. ಸೌಮ್ಯ ಪೂಜಾರಿ, ಶ್ರೀಮಂತ ಗಂಜಿ, ಹಣಮಂತರಾವ ಪಾಟೀಲ, ಮಡಿವಾಳಪ್ಪ ಬಾಗೆವಾಡಿ, ಸುರೇಖಾ ಜೋಶಿ, ಡಾ. ನಂದಿನಿ ಶಿವಶರಣಪ್ಪ ಅವರನ್ನು ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರದಿ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್