2,415 total views
ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ್ ಗ್ರಾಮದ ಅಜಾದ್ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸತತವಾಗಿ ಒಂಬತ್ತು ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರಗಳನ್ನು, ನೆರವೇರಿಸಿಕೊಂಡು ಬಂದು ನಂತರ ಸಕಲ ಭಕ್ತಾದಿಗಳಿಗೆ ಅನ್ನಪ್ರಸಾದ ಕಾರ್ಯಕ್ರಮವನ್ನು ಏರ್ಪಡಿಸಿ. 9ನೇ ದಿನದಂದು ಗಜಾನನ ಯುವಕ ಮಂಡಳಿಯವರು ಗಣೇಶನ ವಿಸರ್ಜನೆ ಕಾರ್ಯಕ್ರಮವನ್ನು ಯಾವುದೇ ರೀತಿಯ ಕೋಮು, ಗಲಭೆಗಳಿಲ್ಲದೆ, ಅತಿ ವಿಜ್ರಂಭಣೆಯಿಂದ, ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ. ಮಹಾಲಿಂಗಪ್ಪ ಸನದಿ. ಅವರು ಗಣೇಶನ ಮಂಗಳಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಣೇಶನ ಕೃಪೆಗೆ ಪಾತ್ರರಾದರು. ಯುವಕರೆಲ್ಲ ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಸಿದ್ದರು. ಈ ಸಂದರ್ಭದಲ್ಲಿ ಊರಿನ ಸಮಸ್ತ, ಗ್ರಾಮಸ್ಥರು ಭಾಗಿಯಾಗಿದ್ದರು