2,585 total views
ಕಾಳಗಿ : ಪಟ್ಟಣದ ನಾಮು ನಾಯಕ ತಾಂಡ,ಮತ್ತು ದೇವಿಕಲ್ ತಾಂಡದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಒಂಬತ್ತು ದಿನ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಯನ್ನು ಭಕ್ತರ ಸಮ್ಮುಖದಲ್ಲಿ ಕಾಳಗಿ ಪಟ್ಟಣದ ರೌದ್ರಾವತಿ ನದಿಯಲ್ಲಿ ಶಾಂತಿಯುತವಾಗಿ ವಿಸರ್ಜಿಸಲು ಬಂದ ಯುವ ಪಡೆ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದರುವಿಶೇಷವೆಂದರೆ ನಾಮು ನಾಯಕ ತಾಂಡದಲ್ಲಿ ಗಣೇಶ ಮೂರ್ತಿಯನ್ನು ಹಬ್ಬದಂದು ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿತ್ತು. ಆದರೆ ರವಿವಾರದಂದು ಭಕ್ತರ ಸಮ್ಮುಖದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಅಂಗವಾಗಿ ಜೋಡಿ ಎತ್ತಿನ ಬಂಡಿಯಲ್ಲಿ ಗಣೇಶನನ್ನು ಅಲಂಕರಿಸಿ ವಿವಿಧ ಪುಷ್ಪಗಳಿಂದ ಮಂಟಪವನ್ನು ಸಿಂಗರಿಸಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಡೊಳ್ಳು ವಾದ್ಯದೊಂದಿಗೆ ಮೆರವಣಿಗೆ ನಡೆಸಿದ ಯುವಕರ ತಂಡ ರೌದ್ರಾವತಿ ನದಿಯಲ್ಲಿ ಭಕ್ತರ ಸಮ್ಮುಖದಲ್ಲಿ ವಿಸರ್ಜಿಸಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.