2,599 total views
ಭಟ್ಕಳ-ಭಟ್ಕಳ ತಾಲ್ಲೂಕಿನ ಚೌತನಿ ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭಟ್ಕಳ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ 5 ಡೆಸ್ಕ್ ಮತ್ತು ಬೇಂಚನ್ನು ದೇಣಿಗೆಯಾಗಿ ಸಂಘದ ಅಧ್ಯಕ್ಷರಾದ ಶ್ರೀ ಈರಪ್ಪ ಗರ್ಡಿಕರ ಅವರು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ನಾಯ್ಕ್ ಹೊಸಮನೆ ಸಮ್ಮುಖದಲ್ಲಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ರಾಜೇಶ್ ದೇವಾಡಿಗ ಬಡ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಮತ್ತು ಅನುಕೂಲಕ್ಕಾಗಿ ಸಂಘದಿಂದ ಈ ಸಾಮಾಜಿಕ ಕಾರ್ಯಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ವಿ.ಎಸ್.ಎಸ್ ಭಟ್ಕಳದ ಈ ಸಾಮಾಜಿಕ ಕಾರ್ಯಕ್ಕೆ ವಿಶ್ವ ಸೇವಾ ಕನ್ನಡ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಈರ ನಾಯ್ಕ್ ಚೌತನಿ ಅವರು ಅಭಿನಂದನೆ ಗಳನ್ನು ಸಲ್ಲಿಸಿದಾರೆ.
ಈ ಸಂದರ್ಭದಲ್ಲಿ ವಿ.ಎಸ್.ಎಸ್ ಭಟ್ಕಳ ಸಂಘದ ಉಪಾಧ್ಯಕ್ಷ ರಾಜೇಶ್ ದೇವಾಡಿಗ,ನಿರ್ದೇಶಕರಾದ ಮಾದೇವ್ ನಾಯ್ಕ್ ಮುಂಡಳ್ಳಿ, ಗಣೇಶ್. ಸೋಮಯ್ಯ ನಾಯ್ಕ್, ವೆಂಕಟ್ರಮಣ ಮೊಗೇರ, ವಿಲಿಯಮ್ಸ್, ಇತರ ನಿರ್ದೇಶಕರು, ಚೌತನಿ ಶಾಲಾ ಶಿಕ್ಷಕರು, ವಿ.ಎಸ್.ಎಸ್ ಸಂಘದ ಜಿ.ಎಂ ರಮೇಶ್ ನಾಯ್ಕ್, ವಿದ್ಯಾರ್ಥಿಗಳು , ಊರ ನಾಗರಿಕರು ಉಪಸ್ಥಿತರಿದ್ದರು.