2,369 total views
ಸಿರುಗುಪ್ಪ : ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಸೆಪ್ಟಂಬರ್ 20ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಹಿಂದುಳಿದ ವರ್ಗಗಳ ರತ್ನ ಡಿ. ದೇವರಾಜ ಅರಸು ರಾಜ್ಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲಾ ಸಿರುಗುಪ್ಪ ರಾಜೀವ್ ಗಾಂಧಿ ನಗರದ ಅಶೋಕ್ ಕುಮಾರ್. ಎ ಬೈಲಪತ್ತಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಬೈಲಪತ್ತಾರ್ ಸಂಘ (ರಿ ) ಬೆಂಗಳೂರು ಆಯ್ಕೆಯಾಗಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ 2024ನೇ ಸಾಲಿನ ದೇವರಾಜ್ ಅರಸು ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಧ್ಯಕ್ಷ ಸೈದಪ್ಪ ಗುತ್ತೇದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಬೈಲಪತರ ಸಂಘ ಹಾಗೂ ಸಿರುಗುಪ್ಪ ತಾಲೂಕು ಬೈಲುಪತರ ಸಂಘ ಅಭಿನಂದಿಸಿದ್ದಾರೆ.
ವರದಿ ಶೇಖರ್ ಹೆಚ್