2,562 total views
ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯಿಂದ ಬಹುಸಂಖ್ಯಾತ ಹಿಂದು ಧರ್ಮಕ್ಕೆ ಅನ್ಯಾಯ:ಡಾ. ಜಾಧವ್
ಕಾಳಗಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಗಾಗಿ ಇಂದು ಬಹುಸಂಖ್ಯಾತ ಹಿಂದೂಗಳು ತಮ್ಮ ಹಬ್ಬಗಳನ್ನು ಸರ್ಕಾರ ನೀಡಿದ ನಿಯಮಾವಳಿಯಂತೆ ಆಚರಣೆ ಮಾಡುವ ದುಸ್ಥಿತಿ ಬಂದೋದಗಿದೆ ಎಂದು ಶಾಸಕ ಡಾ. ಅವಿನಾಶ್ ಜಾಧವ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ರವಿವಾರ ಬಿಜೆಪಿ ಸದಸ್ಯತ್ವ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ಸಮಾಜದ ತುಷ್ಟಿಕರಣಕ್ಕಾಗಿ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಕೋಮು ಗಲಭೆ ಆಗಿದೆ ಎಂದು ದೂರಿದರು.
ಭಾರತೀಯ ಜನತಾ ಪಕ್ಷವು ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ಎಲ್ಲೆಡೆ ಬಿಜೆಪಿ ಸೇರಲು ಜನರು ಉತ್ಸುಕರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಜನರ ಬಳಿ ಹೋಗಿ ಹೆಚ್ಚು ನೋಂದಣಿಗೆ ಮುಂದಾಗಬೇಕು. ಬೂತ್ ಮಟ್ಟದಲ್ಲಿ ಪ್ರತಿ ಬೂತನಲ್ಲಿ ಕನಿಷ್ಠ ಹತ್ತು ಜನರ ತಂಡ ರಚಿಸಿ 300 ಸದಸ್ಯತ್ವ ಮಾಡಿಸಬೇಕು. ಕಳೆದ ಬಾರಿ ಅವರು ಬೇರೆ ಪಕ್ಷದಲ್ಲಿದ್ದು, ಈ ಬಾರಿ ಬಿಜೆಪಿ ಸದಸ್ಯರಾಗಲು ಇಚ್ಚಿಸಿದಲ್ಲಿ ಗೊಂದಲ ಸೃಷ್ಟಿ ಮಾಡದೆ ಅವರ ಸದಸ್ಯತ್ವವನ್ನು ಪಡೆಯಬೇಕು. ಹಳೆಯ ಕಾರ್ಯಕರ್ತರಾಗಿದ್ದರು ಕಡ್ಡಾಯವಾಗಿ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಿ ಸದಸ್ಯತ್ವ ಪಡೆಯಬೇಕು. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಜವಾಬ್ದಾರಿಯುನ್ನು ತೆಗೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡುವಂತೆ ತಿಳಿಸಿದರು.
ಇದೇ ವೇಳೆ ಪಟ್ಟಣದ ಹುನುಮಾನ್ ಮಂದಿರ ಓಣಿ, ಕುರುಬರ ಓಣಿ, ರಾಮ ನಗರ, ಮುತ್ಯಾನಕಟ್ಟಿ ರಸ್ತೆ ಮಾರ್ಗದಲ್ಲಿ ಕೆಲ ಮನೆ ಹಾಗೂ ರಸ್ತೆಯಲ್ಲಿ ಸಂಚರಿಸಿದ ಶಾಸಕರು, ಜನರ ಕುಶಲೋಪರಿ ವಿಚಾರಿಸಿದರು. ಸ್ವಂತಃ ತಾವೇ ಬಿಜೆಪಿ ಧೆಯೋದ್ದೇಶಗಳ ಬಗ್ಗೆ ವಿವರಿಸಿ ಸದಸ್ಯತ್ವ ನೋಂದಣಿ ಮಾಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ್ ಚೆಂಗಟಿ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿದಂತಹ ಪ್ರತಿಯೊಬ್ಬರೂ ಸದಸ್ಯತ್ವ ಪಡೆಯಬಹುದು. ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ, 8800002024 ನಂಬರ್,ಗೆ ಮಿಸ್ಡ್ ಕಾಲ್ ನೀಡಿ, ಬಿಜೆಪಿ ಸದಸ್ಯರಾಗಬಹುದು ಎಂದು ಹೇಳಿದರು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಕದಮ,ಹಣಮಂತ ಒಡೆಯರಾಜ,ಶಿವರಾಯ ಕೊಯಿ, ರಮೇಶ್ ಕಿಟ್ಟದ, ಗಣಪತರಾವ್ ಸಿಂಗಶೆಟ್ಟಿ, ಭೀಮರಾಯ ಮಲಘಾಣ, ಸೂರ್ಯಕಾಂತ ಕಟ್ಟಿಮನಿ, ಬಲರಾಮ ವಲ್ಲ್ಯಾಫುರೆ, ಸುನೀಲ ರಾಜಾಪೂರ, ರಾಜೇಂದ್ರಬಾಬು ಹೀರಾಪೂರ, ಜಗದೀಶ್ ಮಾಲಿಪಾಟೀಲ, ಕಾಳಶೆಟ್ಟಿ ಪಡಶೆಟ್ಟಿ, ಶೇಖರ ಮಾನಶೆಟ್ಟಿ, ಕೃಷ್ಣ ಸಿಂಗಶೆಟ್ಟಿ, ಶ್ರೀನಿವಾಸ್ ಗುರಮಿಠಕಲ್, ಸಂತೋಷ ಜಾಧವ್, ಕೇಸು ಚವ್ಹಾಣ,ರಾಜು ಸಲಗೂರ, ಉಮೇಶ ಸಿಎ, ಸುಂದರ ಸಾಗರ, ನರಸಿಂಗ್ ಜಾಧವ್, ಅಮೃತರಾವ ಪಾಟೀಲ, ವೀರಣ್ಣ ಗೌಡ ಟೆಂಗಳಿ, ಮಂಜುನಾಥ ಭೇರನ್, ಭೀಮರಾವ ರಾಠೋಡ, ಕೃಷ್ಣಾ ರಾಠೋಡ, ಗಣಪತಿ ಸಿಂಗಶೆಟ್ಟಿ, ನಾಗಣ್ಣ ಟೆಂಗಳಿ, ಸೂರ್ಯಕಾಂತ ಹಲಚೇರಿ ಇದ್ದರು.
ರು.