2,651 total views
ಹುಣಸೂರು ಅನೈತಿಕ ಸಂಭಂಧ ವಿರೋಧಿಸಿದ ಪತ್ನಿಯನ್ನ ಪತಿರಾಯನೇ ಭೀಕರವಾಗಿ ಕೊಂದು ಪೊಲೀಸರಿಗೆ ಶರಣಾದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದಲ್ಲಿ ನಡೆದಿದೆ.ರೋಜಾ(37) ಪತಿ ಸ್ವಾಮಿನಾಯಕನಿಂದ ಹತ್ಯೆಗೊಳಗಾದ ದುರ್ದೈವಿ.12 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಹಲವು ವರ್ಷಗಳ ಕಾಲ ಅನ್ಯೋನ್ಯ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಅದೇ ಗ್ರಾಮದ ಮಹಿಳೆಯೊಬ್ಬಳು ಬಿರುಗಾಳಿಯಂತೆ ಎಂಟ್ರಿ ಕೊಟ್ಟಿದ್ದಾಳೆ.5 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಮಹಿಳೆ ಸ್ವಾಮಿನಾಯಕನ ಜೊತೆ ಸಂಭಂಧ ಬೆಳೆಸಿದ್ದಾಳೆ.ಈ ವಿಚಾರ ರೋಜಾಗೆ ಗಮನಕ್ಕೆ ಬಂದು ಗಲಾಟೆ ಆಗಿದೆ.ಒಂದೆರಡು ಬಾರಿ ಸ್ವಾಮಿನಾಯಕನಿಗೆ ಕುಟುಂಬಸ್ಥರು ಬುದ್ದಿವಾದ ಹೇಳಿದ್ದಾರೆ.ಹೋಗಿದ್ದೂ ಸ್ವಾಮಿನಾಯಕ ಮಹಿಳೆಯ ಜೊತೆಗಿನ ಸಂಭಂಧ ಮುರಿದುಕೊಂಡಿಲ್ಲ.ಇತ್ತೀಚೆಗೆ ಇದೇ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಗಲಾಟೆ ಹೆಚ್ಚಾಗಿದೆ.ಸಂಭಂಧ ಬಿಡುವಂತೆ ಪಟ್ಟು ಹಿಡಿದಿದ್ದಾಳೆ.ಇಂದು ಮಧ್ಯಾಹ್ನ ನೀರು ಹಿಡಿಯಲು ಮನೆಯಿಂದ ಹೊರಬಂದ ರೋಜಾ ಮೇಲೆ ಸ್ವಾಮಿನಾಯಕ ಮೊಚ್ಚಿನಿಂದ ಕೊಚ್ಚಿದ್ದಾನೆ.ತೀವ್ರ ರಕ್ತಸ್ರಾವದಿಂದ ರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಪತ್ನಿಯನ್ನ ಭೀಕರವಾಗಿ ಕೊಂದ ಸ್ವಾಮಿನಾಯಕ ಬಿಳಿಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.ಘಟನೆ ನಡೆದ ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..