2,397 total views
ಆಳಂದ:- ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಆರೋಗ್ಯದ ಕುರಿತಾದ ಅರಿವು ತಂದುಕೊಳ್ಳುವ ಮೂಲಕ ಆರೋಗ್ಯವಂತ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಬೆಳಮಗಿ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಪ್ರಾಚಾರ್ಯ ದೇವರಾಜ ಜಾಧವ ಹೇಳಿದರು.
ತಾಲೂಕಿನ ಬೆಳಮಗಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನರೋಣಾ ಸಮುದಾಯ ಆರೋಗ್ಯ ಕೇಂದ್ರ ಆಯೋಜಿಸಿದ್ದ ಹದಿಹರೆಯದ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆಯಿಂದ ಸರ್ಕಾರದ ಮಹತ್ವದ ಹಲವು ಕಾರ್ಯಕ್ರಮಗಳ ಜಾರಿಗೆ ತಂದಿದೆ. ಇದರ ಸದ್ಬಳಕೆಯಾಗಬೇಕು. ಇಂದಿನ ಯುವಕರೇ ನಾಳೆಯ ಪ್ರಜೆಗಳು ಎನ್ನುವ ಹಾಗೆ ಈ ಹದಿ ಹರಿಯದ ಮಕ್ಕಳಲ್ಲಿ ಮಾನಸಿಕ, ಬೌದ್ಧಿಕ ಮತ್ತು ಶಾರೀರಿಕವಾಗಿ ಪ್ರತಿಯೊಂದು ಕೂಡ ಒಂದು ಬೆಳವಣಿಗೆ ಹಂತವಾಗಿರುತ್ತದೆ. ಈ ಹಂತದಲ್ಲಿ ಸಕಾಲಕ್ಕೆ ಸೇವೆ ಒದಗಿಸುವ ಸರ್ಕಾರದ ಸ್ನೇಹ ಕ್ಲಿನಿಕ್ ಸೇವಾ ಲಾಭ ಪಡೆದುಕೊಳ್ಳಬೇಕು ಎಂದರು.ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಚಂದ್ರಕಾಂತ್ ಕೊರೆ ಅವರು ಮಾತನಾಡಿ,
ಪ್ರತಿ ಗುರುವಾರ ಮತ್ತು ಶನಿವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತೆರೆಯುವ ಸ್ನೇಹ ಕ್ಲಿನಿಕ್ನಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ ನೀಡುವ ಶುಚಿತ್ವಗಳನ್ನು ನೀಡಲಾಗುತ್ತದೆ, ಅಗತ್ಯ ಉಳ್ಳುವರು ಪಡೆಯಬೇಕು. ರಕ್ತ ಹೀನತೆಯಿಂದ ಬಳಲುವ ವಿದ್ಯಾರ್ಥಿಗಳಿಗೆ ಕಬ್ಬಿಣಾಂಶ ಮಾತ್ರೆಗಳು ನೀಡಲಾಗುತ್ತದೆ. ವೈಯುಕ್ತಿಕವಾಗಿ ಮಾನಸಿಕ, ಬೌದ್ಧಿಕ ಮತ್ತು ಶಾರೀರಿಕ ಸಮಸ್ಯೆಗಳನ್ನು ನಿವಾರಣೆಗೆ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ಇದರ ಸದ್ಬಳಕೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ಹದಿಹರಿಯದವರಿಗೆ ಸೆಂಟ್ರಿ ನೆಪ್ಕಿನ ಬಳಕೆಯ ಹಾಗೂ ಉಪಯೋಗದ ಅರಿವು ಹೊಂದಿ ಋತುಸಾವ್ರ ನೈರ್ಮಲ್ಯದ ಕುರಿತು ಅರಿವು ತಂದುಕೊಳ್ಳಬೇಕು. ಜೊತೆಗೆ ಪೌಷ್ಟಿಕಂಶದ ಕೊರತೆ ಬಗ್ಗೆ ಮಾನಸಿಕ ಆರೋಗ್ಯದ ಸಮಸ್ಯೆಗಳ ಕುರಿತು ಲೈಂಗಿಕ ಮತ್ತು ಸಂತಾನೋತ್ಪತ್ತಿಯ ಸಂಬಂಧಿಯ ಸಮಸ್ಯೆಗಳು ಋತುಚಕ್ರದ ಸಂಬಂಧಿಸಿದ ಹಾಗೂ ಶಂಕುಗಳ ನಿವಾರಣೆ ಬಗ್ಗೆ ಸಾಂಕ್ರಮಿಮಿಕ ರೋಗಗಳ ಬಗ್ಗೆ ಬಾಲ್ಯ ವಿವಾಹದ ಬಗ್ಗೆ ಹಾಗೂ ಮಿಷನ್ ಸುರಕ್ಷೆ ಬಗ್ಗೆ ತುರ್ತು ಸಂದರ್ಭದಲ್ಲಿ 112ಮತ್ತು 1098 ಉಚಿತ ಸಹಾಯವಾಣಿ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಹೇಳಿದರು.ಇನ್ನೋರ್ವ ಆಪ್ತಸಮಾಲೋಚಕ ದತ್ತು ಪೂಜಾರಿ ಮಾತನಾಡಿ, ಕ್ಷಯ ರೋಗದ ಕುರಿತು ಸಾಂಕ್ರರ್ಮಿಕ ಅಸಂಕ್ರಾಮಿಕ ರೋಗಗಳು ಕುರಿತು ಆನೇಕಾಲ ರೋಗ, ಢೇಂಘಿ, ಮಲೇರಿಯಾ, ಚಿಕನ್ಗುನ್ಯ ಮತ್ತು ಎಚ್ಐವಿ ಏಡ್ಸ್ ಕುರಿತು ಮುಂಜಾಗೃತೆ ವಹಿಸುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಸಹ ಶಿಕ್ಷಕ ಚಂದ್ರಕಾಂತ ಬಂಡಗಾರ, ಪೋತದಾರ, ವೀರಣ್ಣ ಎಸ್, ಕೊರಳ್ಳಿ, ರವಿಕಾಂತ್ ಗುತ್ತೇದಾರ್, ರಾಘವೇಂದ್ರ ಅವರಾದಿ, ಇಂದುಬಾಯಿ ದೇಸಾಯಿ, ಶರಣಮ್ಮ ಭೋಸಗಾ ಸೇರಿದಂತೆ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳು ಶಾಲಾ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಾರ್ಥನೆ ಗೀತೆ ವಿದ್ಯಾರ್ಥಿನಿ ಅಮೃತ ಹಾಡಿದರು. ಶಿಕ್ಷಕ ರಾಜಕುಮಾರ್ ಪಿ. ಸ್ವಾಗತಿಸಿ ನಿರೂಪಿಸಿದರು.
ವರದಿ-ಡಾ ಎಮ್ ಬಿ ಹಡಪದ ಸುಗೂರ ಎನ್