2,396 total views
ಕುಮಟಾ :-ಸೆ.07 ರಿಂದ 14 ರವರೆಗೆ ಡೆನ್ಮಾರ್ಕ್ ನಲ್ಲಿ ನಡೆದ 15ನೇ ವಿಶ್ವ ಫೈಯರ್ ಫೈಟರ್ಸ್ ಗೇಮ್ಸ್ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕುಮಟಾ ಅಗ್ನಿಶಾಮಕ ದಳದ ಲೀಡಿಂಗ್ ಫೈಯರ್ ಮ್ಯಾನ್ ಹಾಗೂ ಪ್ರಭು ಫಿಟ್ನೆಸ್ ಸೆಂಟರಿನ ಸದಸ್ಯರಾದ ಶ್ರೀ ರಾಜೇಶ್ ಕೆ ಮಡಿವಾಳ ಬೆಳ್ಳಿ ಪದಕವನ್ನು ತಮ್ಮ ಮುಡುಗೇರಿಸಿಕೊಂಡು ನಮ್ಮ ಜಿಲ್ಲೆ ರಾಜ್ಯ ಹಾಗೂ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಇವರ ಕಠಿಣ ಪರಿಶ್ರಮ, ದೃಢಸಂಕಲ್ಪ ಹಾಗೂ ಸಮಯಕ್ಕೆ ನೀಡುವ ಮಹತ್ವವೇ ಇವರ ಈ ಸಾಧನೆಗೆ ಕಾರಣವೆಂದು ಪ್ರಭು ಫಿಟ್ನೆಸ್ ಸೆಂಟರಿನ ಸಂಚಾಲಕರಾದ ವೆಂಕಟೇಶ್ ಪ್ರಭು ವ್ಯಕ್ತಪಡಿಸಿದ್ದಾರೆ.