2,268 total views
ಕಲ್ಬುರ್ಗಿ ಜಿಲ್ಲಾ ಬರಹಗಾರ ಬಳಗದ ಜಿಲ್ಲಾಧ್ಯಕ್ಷರಾದ ಮಹಾಂತೇಶ್ ಪಾಟೀಲ್ ಅವರ ನೇತೃತ್ವದಲ್ಲಿ. ಇದೇ ತಿಂಗಳು 21-9-2024ರಂದು ಜೇವರ್ಗಿಯ ಪಟ್ಟಣದಲ್ಲಿ ಗಮಕ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ ಮಹಾಂತೇಶ್ ಪಾಟೀಲ್ ಅವರ ಎರಡನೇ ಕವನ ಸಂಕಲನದ ಜೀವನದ ರತ್ನ ಕೃತಿ ಬಿಡುಗಡೆ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಅಭಿಮಾನಿಗಳು ಹಾಗೂ ಪ್ರಗತಿಪರ ಸಮಾಜ ಚಿಂತಕರು ಸಂಘಟನಾ ಹೋರಾಟಗಾರರು ಹಾಗೂ ತಾಲೂಕಿನ ಸಮಸ್ತ ನಾಗರಿಕರು ಮತ್ತು ಪತ್ರಿಕಾ ಮಾಧ್ಯಮದ ಮಿತ್ರರು ಭಾಗವಹಿಸಲಿದ್ದಾರೆ ಎಂದು ಕಲ್ಬುರ್ಗಿ ಜಿಲ್ಲಾ ಬರಹಗಾರ ಬಳಗದ ಜಿಲ್ಲಾಧ್ಯಕ್ಷರಾದ ಮಹಾಂತೇಶ್ ಪಾಟೀಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ