2,607 total views
ನಗರದ ಶಹರ ಪೋಲಿಸ್ ಠಾಣೆ ಆವರಣದಲ್ಲಿ ನಡೆದ ಗೌರಿ ಗಣೇಶ ಹಬ್ಬದ ಶಾಂತಿ ಪಾಲನಾ ಪೂರ್ವಭಾವಿ ಸಭೆಯಲ್ಲಿ ಅವರು.
ಎಸಿ.ಶ್ವೇತಾ ಬಿಡೀಕರ ಮಾತನಾಡಿ.ದೇಶ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಎಲ್ಲರೂ ಒಂದಾಗು ಉದ್ದೇಶ ಹೊಂದಿದೆ. ಇವಾಗ ಎಲ್ಲರೂ ಸೇರಿ ಆಚರಣೆ ಹಬ್ಬವಾಗಿದೆ. ಗಣೇಶನ ಹಬ್ಬವನ್ನು ಸೌಹಾರ್ದತೆಯಿಂದ ನಡೆದುಕೊಂಡು ಬರುವ ಹಬ್ಬ. ಕೋಮುಗಲಬೆ ಆಗದಂತೆ ನೋಡಿಕೊಳ್ಳಬೇಕು. ಕೆರೆಯಲ್ಲಿ ವಿಸರ್ಜನೆ ಮಾಡುವಾಗ ಬಹಳ ಜಾಗ್ರತೆಯಿಂದ ವಹಿಸಿಬೇಕು. ನಗರಸಭೆಯವರು ಬೆಳಕಿನ ವ್ಯವಸ್ಥೆ ಮಾಡಬೇಕು. ಪಿಒಪಿ ಗಣೇಶ ಬಗ್ಗೆ ಡಿಸಿ ಅವರ ಗಮನಕ್ಕೆ ತರುತ್ತೇನೆ. ಡಿಜೆ ಹೊರತು ಪಡಿಸಿ. ವಿವಿಧ ಕಲಾವಿದರಿಂದ ಕಲೆಗೆ ಬೆಲೆ ಕೊಡಬೇಕು ಎಂದರು.
ಡಿಎಸ್ ಪಿ.ಶಾಂತವೀರ ಈ. ಮಾತನಾಡಿ. ವಿಗ್ನವಿನಾಯಕನಿಗೆ ನಮ್ಮ ವಿಗ್ನನಿವಾರ್ಣೆ ಮಾಡಿಕೊಂಡ ಪರಂಪರೆ ಆಗಿದೆ. ಪೂರ್ವಜರು ಆಚರಣೆ ಮಾಡಿಕೊಂಡು ಬಂದಿದ್ದಾರೆ. ಇವಾಗ ಆಚರಣೆಗಳನ್ನು ಮಾಡುವುದು ಬದಲಾವಣೆ ಆಗುತ್ತಿವೆ. ಜಮಖಂಡಿ ಮಹಾ ಮಂಡಲ ಕುರಿತು ಬೇರೆ ಕಡೆಗಳಲ್ಲಿ ಉದಾಹರಣೆ ನೀಡಿದ್ದೇನೆ. ಗಣೇಶ ಹಬ್ಬದಲ್ಲಿ ಯಾವುದು ಕಾನೂನು ಕ್ರಮ ತೆಗೆದುಕೊಳ್ಳಬೇಕು ಅದನ್ನು ನಾವುಗಳು ಮಾಡುತ್ತವೆ. ಪೋಲಿಸ್ ಇಲಾಖೆಯ ಜೊತೆಗೆ ಸಹಕಾರ ನೀಡುತ್ತಿದ್ದಾರೆ. ನಮ್ಮ ಇಲಾಖೆ ಸಹಕಾರ ನೀಡುತ್ತದೆ. ಡಿಜೆ ಯಿಂದ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಅದನ್ನು ಹೊರತುಪಡಿಸಿ ನಮ್ಮ ಕಲಾ ತಂಡಗಳು ಇವೆ. ಅವುಗಳನ್ನು ಅಳವಡಿಸಿ. ಕಲಾವಿದರಿಗೆ ಅವಕಾಶ ನೀಡಬೇಕು. ಪ್ರತಿಷ್ಠಾನದಲ್ಲಿ ಸ್ಥಳದಲ್ಲಿ ಮಹಾ ಮಂಡಲ ವತಿಯಿಂದ ಹತ್ತು ಜನ ಯುವಕರಿಗೆ ಪೋಲಿಸ್ ಮಿತ್ರ ಎಂದು ಅನುಮತಿ ನೀಡಲಾಗುತ್ತದೆ. ಮೆರವಣಿಗೆಯಲ್ಲಿ ತಡವಾಗಿ ಪ್ರಾರಂಭ ಮಾಡಬೇಡಿ. ಬೇಗೆನೆ ಪ್ರಾರಂಭ ಮಾಡಿದರೆ ಎಲ್ಲ ಗಣೇಶಗಳನ್ನು ನೋಡಲು ಹಾಗೂ ಕಲಾವಿದರನ್ನು ನೋಡಲು ಅನುಕೂಲವಾಗುತ್ತದೆ.ವಿಸರ್ಜನೆ ಸಮಯದಲ್ಲಿ ಯಾವುದು ಮಾರ್ಗ ನೀಡಿರುತ್ತಿರಿ. ಅದೇ ಮಾರ್ಗದಲ್ಲಿ ಹೋಗಬೇಕು. ಬೇರೆ ಮಾರ್ಗದಲ್ಲಿ ಹೋಗಬಾರದು ಎಂದರು.
ಸದಾಶಿವ ಮಕ್ಕೋಜಿ ಮಾತನಾಡಿ. ಅಧಿಕಾರಿಗಳ ಜೊತೆಗೆ ಕೈ ಜೋಡಿಸಬೇಕು. ಮಣ್ಣಿನ ಗಣೇಶ ಪ್ರತಿಷ್ಠಾನ ಮಾಡಬೇಕು. ಪರಿಸರ ಹಾನಿ ದೃಷ್ಟಿಯಿಂದ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಜೋತಿಗಿರೀಶ ಮಾತನಾಡಿ. ಕೆರೆಯಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಲಾಗುತ್ತಿದೆ. ಮಹಾ ಮಂಡಲದವರು ಅಧಿಕಾರಿಗಳ ಕೈ ಜೋಡಿಸಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಯಾರು ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ಹೆಸ್ಕಾ ಅಧಿಕಾರಿ ಮಾತನಾಡಿ. ವಿದ್ಯುತ್ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಎಂದರು.
ಅಗ್ನಿಶಾಮಕ ದಳದ ಅಧಿಕಾರಿ ರಾಜು ತಳವಾರ. ಧೂಮಪಾನ ನಿಷೇಧದ ನಾಮಫಲಕ ಹಾಕಬೇಕು. ಸ್ಪೋಟಕ ವಸ್ತುಗಳನ್ನು ಮಂಟಪದಲ್ಲಿ ಇಡಬಾರದು. ಎರಡು ಬ್ಯಾರಲು ನೀರು. ಎರಡು ಬಕೇಟು ಮರಳು ತುಂಬಿ ಇಡಬೇಕು ಇದರಿಂದ ಅಗ್ನಿ ಅವಗಡವನ್ನು ತಪ್ಪಿಸಲು ಸಾಧ್ಯ ಎಂದರು.