2,344 total views
ಬಳ್ಳಾರಿ ಕರ್ನಾಟಕ ರಾಜ್ಯ ಏಡ್ಸ್ ಪ್ರೈವೇಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಬಳ್ಳಾರಿ ವತಿಯಿಂದ ಇಂಟೆನ್ಸಿ ಫೈಡ್ ಕ್ಯಾಂಪನ್ ಪ್ರಯುಕ್ತವಾಗಿ ಜಿಲ್ಲಾ ಕ್ರೀಡಾಂಗಣ ಬಳ್ಳಾರಿಯಲ್ಲಿ ದಿನಾಂಕ ೫-೯-೨೦೨೪ ರಂದು ಸಮಯ ಬೆಳಿಗ್ಗೆ ೮:೩೦ ಕ್ಕೆ ನಾಕೌಟ್ ಮಾದರಿಯಲ್ಲಿ ಕಬ್ಬಡ್ಡಿ ಪಂದ್ಯಾವಳಿಗಳನ್ನು ಕಬ್ಬಡಿ ಅಸೋಸಿಯೇಷನ್ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುತ್ತದೆ. ಇದರ ಉದ್ದೇಶ, ಯುವಕರಲ್ಲಿ ಇತ್ತೀಚಿಗೆ ಹೆಚ್ಐವಿ ಪ್ರಕರಣಗಳು ದ್ವಿಗುಣಗೊಳ್ಳುತ್ತಿದ್ದು, ಸರಿಯಾದ ಮಾಹಿತಿಯನ್ನು ನೀಡುವುದರ ಮುಖಾಂತರ ಎಚ್ಐವಿ ಅನ್ನು ಸೊನ್ನೆಗೆ ತರುವುದು ಆಗಿರುತ್ತದೆ. ಜಿಲ್ಲೆಯಲ್ಲಿ ವಿಭಿನ್ನ ಐಇಸಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿರುತ್ತದೆ. ಈಗಾಗಲೇ ಫ್ಲಾಷ್ ಮಾಬ್, ಜಾತ್ರೆ ಸಂತೆಗಳಲ್ಲಿ ಐಇಸಿ ಮತ್ತು ಕಲಾತಂಡಗಳ ಮುಖಾಂತರ ಎಚ್ಐವಿ ಏಡ್ಸ್ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಕಾರಣ, ಪ್ರೊ ಕಬ್ಬಡಿ ಪಂದ್ಯಾವಳಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಸಾರ್ವಜನಿಕರು ಬಂದು ಕಾರ್ಯಕ್ರಮವನ್ನು ವೀಕ್ಷಿಸಿ ಎಚ್ಐವಿ ಏಡ್ಸ್ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಡಾಕ್ಟರ್ ಇಂದ್ರಾಣಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಬಳ್ಳಾರಿ ಮನವಿ ಮಾಡಿದ್ದಾರೆ.