2,050 total views
ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆ.೬ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.ನೇರ ಸಂದರ್ಶನವು ನಗರದ ಸಿರುಗುಪ್ಪ ರಸ್ತೆಯ ಹವಂಭಾವಿ ಬಳಿಯ ಬ್ರಿಲಿಯಂಟ್ ಪಬ್ಲಿಕ್ ಶಾಲೆಯ ಎದುರು ಮಾಸ್ಸೆ ಫರ್ಗುಸನ್ ಟ್ರಾಕ್ಟರ್ಗಳು, ಹೊಸ ಟ್ರಾಕ್ಟರ್ ಶೋರೂಂ, ಟಫೆ ಮಾಸ್ಸೆ ಫರ್ಗುಸನ್, ಬಳ್ಳಾರಿ ಇಲ್ಲಿ ನಡೆಯಲಿದ್ದು, ಇವರು ತಮ್ಮಲ್ಲಿನ ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುವರು. ಈ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಬೇಕಾದ ದಾಖಲೆ: ಆಧಾರ್ ಕಾರ್ಡ್, ಸ್ವ ವಿವರಗಳೊಂದಿಗೆ ಹಾಜರಾಗಬೇಕು. ಆಸಕ್ತ ಆಭ್ಯರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊ.೯೭೪೨೭೧೮೮೯೧, ೯೬೬೩೨೬೩೦೮೬, ೯೯೦೦೮೨೭೭೬೮, ೬೩೬೦೪೦೮೦೯೪ ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.