2,050 total views
ಬಳ್ಳಾರಿ ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ೧೨ ನೇ ಘಟಿಕೋತ್ಸವ ಸೆ.೬ ರಂದು ವಿವಿಯ ಆವರಣದ ಬಯಲು ರಂಗಮಂದಿರದಲ್ಲಿ ಮಧ್ಯಾಹ್ನ ೧೨.೩೦ ಕ್ಕೆ ಹಮ್ಮಿಕೊಂಡಿದೆ. ಈ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುದಾಕರ್ ಉಪಸ್ಥಿತರಿರಲಿದ್ದಾರೆ.
ಘಟಿಕೋತ್ಸವ ಭಾಷಣವನ್ನು ಧಾರವಾಡದ ಐಐಟಿಯ ಪ್ರಾಧ್ಯಾಪಕ ಪ್ರೊ.ಎಸ್.ಎಂ.ಶಿವಪ್ರಸಾದ್ ಮಾಡಲಿದ್ದಾರೆ. ಪ್ರತಿರ್ಷದಂತೆ ಗೌರವ ಡಾಕ್ಟರೇಟ್, ಪಿಹೆಚ್ ಡಿ ಪದವಿ, ಪ್ರದಾನ ಮತ್ತು ರ್ಯಾಂಕ್ ವಿಜೇತರಿಗೆ ಪದಕ ವಿತರಣೆ ನಡೆಯಲಿದೆ. ಸಮಾರಂಭದಲ್ಲಿ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಸ್ವಾಗತ ಭಾಷಣ ಮಾಡಲಿದ್ದು. ಕುಲಸಚಿವ ಎಸ್.ಎನ್.ರುದ್ರೇಶ್. ರಮೇಶ್ ಓಲೇಕಾರ್, ಸಿಂಡಿಕೇಟ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.