2,381 total views
ಬಳ್ಳಾರಿ ದೃಷ್ಠಿದೋಷವುಳ್ಳವರ ಬಾಳಿಗೆ ಬೆಳಕಾಗುವ ನೇತ್ರದಾನ ಮಾಡುವ ಪುಣ್ಯದ ಕರ್ಯದಲ್ಲಿ ಭಾಗಿಯಾಗಿ ಸರ್ಥಕತೆ ಹೊಂದಬೇಕು ಎಂದು ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯದ ನರ್ದೇಶಕ ಡಾ.ಟಿ.ಗಂಗಾಧರ ಗೌಡ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ನೇತ್ರ ಭಂಡಾರ ಇವರ ಸಹಯೋಗದಲ್ಲಿ ೩೯ನೇ ರಾಷ್ಟಿಯ ನೇತ್ರದಾನ ಪಾಕ್ಷಿಕ ಅಂಗವಾಗಿ ವೈದ್ಯ ಭವನದಲ್ಲಿ ಮಂಗಳವಾರ ರ್ಪಡಿಸಿದ್ದ ಜಾಗೃತಿ ಕರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮರಣದ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣು ಮಾಡದೇ ದೃಷ್ಠಿದೋಷ ಉಳ್ಳವರಿಗೆ ದಾನ ಮಾಡುವ ಅದ್ಭುತ ಕರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಆಕಸ್ಮಿಕ ಘಟನೆಗಳಲ್ಲಿ ಕಣ್ಣುಗಳನ್ನು ಕಳೆದುಕೊಂಡು ದೃಷ್ಟಿಹೀನರಾದಂತಹ ಜನತೆಗೆ ಇನ್ನೊಬ್ಬರ ಕಣ್ಣುಗಳನ್ನು ಕೊಡುವ ಮೂಲಕ ಅಂಧತ್ವ ನಿವಾರಣೆಗೆ ಅವಕಾಶವಿದ್ದು, ಬಿಮ್ಸ್ ನೇತ್ರ ಭಂಡಾರದಲ್ಲಿ ಕಣ್ಣುಗಳನ್ನು ದಾನವಾಗಿ ಪಡೆಯಲು ಹಾಗೂ ಅಗತ್ಯವುಳ್ಳವರಿಗೆ ಶಸ್ತçಚಿಕಿತ್ಸೆ ಮೂಲಕ ಜೋಡಿಸುವ ಕರ್ಯವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ವ್ಯಕ್ತಿ ಮೃತಪಟ್ಟ ಸಂರ್ಭದಲ್ಲಿ ಕುಟುಂಬದ ಸದಸ್ಯರು ಬಿಮ್ಸ್ನ ನೇತ್ರ ಭಂಡಾರದ ೯೪೮೩೪೧೪೮೨೪ ಸಂಖ್ಯೆಗೆ ಕರೆ ಮಾಡಿ ತಿಳಿಸಿದಾಗ ವೈದ್ಯಕೀಯ ತಂಡವು ನೇತ್ರಗಳನ್ನು ಸುರಕ್ಷಿತವಾಗಿ ಪಡೆದುಕೊಳ್ಳುತ್ತಾರೆ. ಈ ಎಲ್ಲಾ ಕರ್ಯವು ವ್ಯಕ್ತಿ ಮೃತಪಟ್ಟ ೬-೮ ಗಂಟೆಯೊಳಗೆ ಮಾಡಬೇಕಾಗುತ್ತದೆ ಎಂದರು. ಕಳೆದ ಜನವರಿಯಿಂದ ಇಲ್ಲಿಯವರೆಗೆ ೫೦ ಜನರು ನೇತ್ರದಾನ ಮಾಡಿದ್ದಾರೆ. ಅದರಲ್ಲಿ ೪೫ಕ್ಕೂ ಹೆಚ್ಚು ಜನರಿಗೆ ನೇತ್ರವನ್ನು ಅಳವಡಿಸಿ ಕಣ್ಣನ್ನು ಜೀವಂತವಿರುಸುವ ಮಹತ್ವದ ಕರ್ಯ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ಬಾಬು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕರ್ನಿಯಾ ಅಂಧರಿಗೆ ದೃಷ್ಟಿ ಮರಳಿ ನೀಡುತ್ತವೆ, ನೇತ್ರದಾನ ಪ್ರತಿಯೊಂದು ಕುಟುಂಬದ ಸಂಪ್ರದಾಯವಾಗಬೇಕು. ಪ್ರತಿಯೊಬ್ಬ ಅಂಧ ವ್ಯಕ್ತಿ ಸಹ ಜಗತ್ತನ್ನು ನೋಡುವ ಅಪರ್ವ ಕ್ಷಣಗಳಿಗೆ ಕೈ ಜೋಡಿಸೋಣ ಎಂದು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಕರ್ಯಕ್ರಮದ ಮೂಲಕ ಜಿಲ್ಲಾಡಳಿತದ ಸಹಕಾರದೊಂದಿಗೆ ಎನ್ಎಮ್ಡಿಸಿ, ಸಿಎಸ್ಆರ್ ಅನುದಾನದಡಿ ಬಿಮ್ಸ್ ಉಚಿತ ಕಣ್ಣಿನಪೊರೆ ಶಸ್ತçಚಿಕಿತ್ಸೆ ದೃಷ್ಟಿದೋಷ ಉಳ್ಳವರಿಗೆ ಕನ್ನಡಕ ವಿತರಣೆ ಕೈಗೊಳ್ಳಲಾಗುತ್ತಿದ್ದು, ಪ್ರಸ್ತುತ ರ್ಷ ೨೭೪೧ ಕನ್ನಡಕಗಳನ್ನು ವಿತರಿಸಲಾಗಿದ್ದು, ೬೦೧೧ ಜನರಿಗೆ ಕಣ್ಣಿನ ಪೊರೆ ಶಸ್ತçಚಿಕಿತ್ಸೆ ಮಾಡಲಾಗಿದೆ ಎಂದು ಅವರು ಹೇಳಿದರು. ಈಗಾಗಲೇ ಬಳ್ಳಾರಿ ಜಿಲ್ಲೆಯು ಅಂಗಾಂಗ ದಾನದಲ್ಲಿ ೪೭೨೨ ಜನರು ಅಂಗಾಂಗ ದಾನ ನೋಂದಣಿ ಮಾಡುವ ಮೂಲಕ ರಾಷ್ಟçಮಟ್ಟದಲ್ಲಿ ಮೊದಲ ಸ್ಥಾನದಲ್ಲಿದ್ದು ನೋಂದಣಿ ಮಾಡಿಸಬೇಕು ಎಂದು ಕೋರಿದರು.
ಈ ಸಂರ್ಭದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ವೀರೇಂದ್ರ ಕುಮಾರ್, ನೇತ್ರ ತಜ್ಞ ಡಾ.ಮಧನ್ ಜೋಶಿ, ವೈದ್ಯಕೀಯ ಅಧೀಕ್ಷಕ ಡಾ.ಚಿದಂಬರಂ, ನೇತ್ರ ವಿಭಾಗದ ಮುಖ್ಯಸ್ಥ ಡಾ.ಯೋಗೇಶ್, ನೇತ್ರ ಭಂಡಾರದ ನರ್ದೇಶಕ ಡಾ.ಪರಸಪ್ಪ, ರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಸುಮ, ನೇತ್ರ ವಿಭಾಗದ ಡಾ.ರಮೇಶ್ ನಡಮನಿ ಸೇರಿದಂತೆ ವೈದ್ಯ ವಿದ್ಯರ್ಥಿಗಳು, ರ್ಸಿಂಗ್ ಪ್ರಶಿಕ್ಷಣರ್ಥಿಗಳು ಉಪಸ್ಥಿತರಿದ್ದರು.