2,379 total views
ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾರ್ಧಕ ಸಂಘದ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಐದು ರ್ಷಗಳ ಕಾನೂನು ಪದವಿ ಕರ್ಸನ್ನು ಪ್ರಸಕ್ತ ೨೦೨೪-೨೫ ಸಾಲಿನಿಂದ ಆರಂಭಿಸಲು ಭಾರತೀಯ ವಕೀಲರ ಪರಿಷತ್ ಮತ್ತು ಕಾನೂನು ವಿಶ್ವ ವಿದ್ಯಾಲಯ ಅನುಮತಿ ನೀಡಿದ್ದು. ಇಂದಿನಿಂದÀ ಆಡ್ಮಿಷನ್ ಆರಂಭಿಸಲಿದ್ದು ಈ ತಿಂಗಳ ೧೨ ರ ವರಗೆ ಪ್ರವೇಶಾತಿಗೆ ಕೊನೆಯ ದಿನವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮಿಂಚೇರಿ ನರೇಂದ್ರಬಾಬು ಅವರು ತಿಳಿಸಿದ್ದಾರೆ. ಈ ವರೆಗೆ ೩ ರ್ಷದ ಕಾನೂನು ಪದವಿ ಕರ್ಸ್ ನಡೆಯುತ್ತಿತ್ತು. ಪದವಿ ನಂತರ ಕಾನೂನು ಪದವಿಗೆ ಪ್ರವೇಶ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನಿಂದ ಐದು ರ್ಷಗಳ ಈ ಕರ್ಸ್ ಆರಂಭಕ್ಕೆ ಅನುಮತಿ ದೊರೆತಿದ್ದು ೬೦ ಜನ ವಿದ್ಯರ್ಥಿಗಳಿಗೆ ಪ್ರವೇಶ ನೀಡಬಹುದಾಗಿದೆ. ಪಿಯುಸಿ ಅಥವಾ ೧೦-೨ ಅಬ್ಯಾಸ ಮಾಡಿದವರು ಪ್ರವೇಶ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ರ್ನಾಟಕ ಭಾಗದ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪೈಕಿ ಐದು ರ್ಷಗಳ ಕಾನೂನು ಪದವಿ ಕರ್ಸನ್ನು ಹೊಂದಿರುವ ಏಕೈಕ ಕಾಲೇಜು ಇದಾಗಿದೆ, ಹೆಚ್ಚಿನ ಅನುಭವ ಹೊಂದಿರುವ ಉಪನ್ಯಾಸಕರು, ಉತ್ತಮ ಸೌಲಭ್ಯ ಇರುವ ಕಾಲೇಜು ಇದಾಗಿದೆ, ಈ ಅವಕಾಶವನ್ನು ಈ ಭಾಗದ ವಿದ್ಯರ್ಥಿಗಳು ಉಪಯೋಗಿಸಿಕೊಳ್ಳಲು ನರೇಂದ್ರಬಾಬು ಅವರು ವಿದ್ಯರ್ಥಿಗಳಲ್ಲಿ ಮನವಿ ಮಾಡಿದ್ದಾರೆ.