2,375 total views
ಕಲ್ಬುರ್ಗಿ ಸುದ್ದಿ.
ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ವ್ಯಾಪ್ತಿಯಲ್ಲಿ ಕೆಲ ಮಧ್ಯವರ್ತಿಗಳು ಮುಗ್ಧ ಜನರಿಗೆ ನಿಮಗೆ ವಸತಿ ಯೋಜನೆಯ ಮನೆಗಳನ್ನು ಸರಕಾರದಿಂದ ಆಯ್ಕೆ ಮಾಡಿಕೊಂಡು ಬೆಂಗಳೂರಿನ ನಿಗಮದಿಂದ ಆಯ್ಕೆ ಮಾಡಿಕೊಂಡು ಬರುತ್ತೇವೆ ಅದಕ್ಕೆ ಮೂವತ್ತು ಸಾವಿರ ಹಣ ಖರ್ಚಾಗುತ್ತದೆ ಎಂದು ಹಳ್ಳಿಯ ಮುಗ್ಧ ಜನರಿಗೆ ದಲ್ಲಾಳಿಗಳು ಯಾಮಾರಿಸುತ್ತಿರುವದು ಕಂಡುಬಂದಿದ್ದು ಈ ಹಿನ್ನಲೆಯಲ್ಲಿ ಯಾರು ಮಧ್ಯವರ್ತಿಗಳಿಗೆ ದುಡ್ಡು ಕೊಟ್ಟು ಮೋಸ ಹೋಗಬೇಡಿ ಅದೇ ರೀತಿಯಾಗಿ ನಿಮಗೆ ಆ ನಿಗಮದಿಂದ ಅಥವಾ ಈ ನಿಗಮದಿಂದ ಗಂಗಾ ಕಲ್ಯಾಣ ಅಥವಾ ನಿಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸುತ್ತೇವೆ ಅಥವಾ ನಿಮಗೆ ಆ ನಿಗಮದಿಂದ ಲೋನ್ ಮಾಡಿಸುತ್ತೇವೆ ಅಂತ ಹೇಳಿ ಬ್ರೋಕರ್ ಗಳು ಬಂದು ದುಡ್ಡು ಕೇಳಿದರೆ ಯಾರು ಹಣವುಳ್ಳ ವ್ಯಕ್ತಿಗಳು ದುಡ್ಡು ಕಳೆದುಕೊಂಡು ಮೋಸ ಹೋಗಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಮಹಾಂತಗೌಡ ನಂದಿಹಳ್ಳಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಾಲೂಕಿನ ಜನತೆಗೆ ಮನವಿ ಮಾಡಿದ್ದಾರೆ.
ವರದಿ ಜೆಟ್ಟಪ್ಪ ಎಸ್ ಪೂಜಾರಿ