2,344 total views
ಕುಮಟಾ :-ಸಪ್ಟೆಂಬರ್ 3 ರಂದು ನಡೆದ ಗೋಕರ್ಣ ವಲಯ ಮಟ್ಟದ 14 ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಸ.ಹಿ.ಪ್ರಾ ಶಾಲೆ ಹೊಸ್ಕೇರಿ ಕಡಿಮೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಗಂಡು ಮಕ್ಕಳ ವೈಯಕ್ತಿಕ ವಿಭಾಗದ 100 ಮೀ. ಓಟದಲ್ಲಿ ತಿಲಕ ಲಕ್ಷ್ಮಣ ಗೌಡ ಪ್ರಥಮ, 200 ಮೀ. ಓಟದಲ್ಲಿ ತಿಲಕ ಲಕ್ಷ್ಮಣ ಗೌಡ ಪ್ರಥಮ, 400 ಮೀ. ಓಟದಲ್ಲಿ ಪರೀತ ಹನುಮಂತ ಗೌಡ ದ್ವಿತೀಯ, ಮಯೂರ ನಾಗೇಂದ್ರ ಗೌಡ ತೃತೀಯ, 600 ಮೀ. ಓಟದಲ್ಲಿ ನಂದೇಶ ರಾಘವೇಂದ್ರ ಆಗೇರ ದ್ವಿತೀಯ, ಗುಂಪು ವಿಭಾಗದಲ್ಲಿ ಖೋಖೋ ಪ್ರಥಮ, ವಾಲಿಬಾಲ್ ದ್ವಿತೀಯ ಹೆಣ್ಣು ಮಕ್ಕಳ ವೈಯಕ್ತಿಕ ವಿಭಾಗದ 100 ಮೀ. ಓಟದಲ್ಲಿ ವರ್ಷಾ ಸೋಮಶೇಖರ ನಾಯ್ಕ ದ್ವಿತೀಯ, 400 ಮೀ. ಓಟದಲ್ಲಿ ಅನೀಶಾ ಚಂದ್ರು ಆಗೇರ ದ್ವಿತೀಯ, 600 ಮೀ. ಓಟದಲ್ಲಿ ಆಶಿತಾ ಸಂತೋಷ ಆಗೇರ ತೃತೀಯ,ಹೆಣ್ಣು ಮಕ್ಕಳ ಗುಂಪು ವಿಭಾಗದಲ್ಲಿ ಖೋ ಖೋ ದಲ್ಲಿ ಪ್ರಥಮ, ಕಬ್ಬಡ್ಡಿಯಲ್ಲಿ ದ್ವಿತೀಯ, ಚೆಸ್ ನಲ್ಲಿ ಕು. ದೀಕ್ಷಾ ಪ್ರಥಮ ಸ್ಥಾನ ಪಡೆದಿರುತ್ತಾರೆ. ಗೋಕರ್ಣ ವಲಯದ ಒಟ್ಟು 3 ಕ್ಲಸ್ಟರ್ ನ ಶಾಲೆಗಳು ಸ್ಪರ್ಧೆಯಲ್ಲಿದ್ದವು. ಗುಂಪು ವಿಭಾಗದಲ್ಲಿ ಒಟ್ಟು 2 ತಂಡಗಳು, ವೈಯಕ್ತಿಕ ವಿಭಾಗದಲ್ಲಿ ಒಟ್ಟು 7 ವಿದ್ಯಾರ್ಥಿಗಳು ಕುಮಟಾದಲ್ಲಿ ನಡೆಯಲಿರುವ ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಮಕ್ಕಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ರಾಜೀವ ಎಂ. ಗಾಂವಕರವರು ತರಬೇತಿ ನೀಡಿದ್ದರು. ತಾಲೂಕು ಮಟ್ಟಕ್ಕೆ ಆಯ್ಕೆಯಾದ ಒಟ್ಟು 30 ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕಿಯರಾದ ಸರಿತಾ ಎಸ್ ಆಚಾರಿಯವರು ನೋಟಬುಕ್ ನೀಡಿ ಶುಭ ಹಾರೈಸಿದರು. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಾಧ್ಯಾಪಕರಾದ ಉಮಾ ಜಿ. ನಾಯ್ಕ, ಶಾಲಾ ಶಿಕ್ಷಕ ವೃಂದ, ಪಾಲಕರು, ಪೋಷಕರು ಹಾಗೂ ಊರ ನಾಗರಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.