2,381 total views
ಇಂಡಿ: ಇಂಡಿ ತಾಲ್ಲೂಕಿನ ತಡವಲಗಾ, ಗಣವಲಗಾ , ಬೋಳೆಗಾಂವ ಗ್ರಾಮಗಳಲ್ಲಿ ಈ ಬಾರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಅಂಗವಾಗಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಿರುವ ಆಯೋಜಕರು ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶಾಂತಿ ಸಭೆಯನ್ನು ಹೋರ್ತಿ ಪೋಲಿಸ್ ಠಾಣೆ ಪಿಎಸ್ಐ ದೀಪಾ ಗೋಡೆಕಾರ ಅವರ ನೇತೃತ್ವದಲ್ಲಿ ತಡವಲಗಾ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.ಸಭೆಯನ್ನುಉದ್ದೇಶಿಸಿ ಮಾತನಾಡಿದ ಹೋರ್ತಿ ಪೋಲಿಸ್ ಠಾಣೆ ಪಿಎಸ್ಐ ದೀಪಾ ಗೋಡೆಕಾರ ಅವರು ಈ ಬಾರಿ ಶ್ರೀ ಗಣೇಶ ಚತುರ್ಥಿ ಆಚರಣೆಯನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು.ಹಾಗೂ ಆಯೋಜಕರು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಪರಿಸರ ಸ್ನೇಹಿ ವಿಗ್ರಹಗಳನ್ನು ಪ್ರತಿಪ್ಠಾಪಿಸಲು, ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು.ಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕು, ಪೆಂಡಾಲ್ ಸುರಕ್ಷತೆ ಮತ್ತು ಸಿಸಿ ಟಿವಿ ಕ್ಯಾಮರ ಅಳವಡಿಕೆ, ಏಕಗವಾಕ್ಷಿ ವ್ಯವಸ್ಥೆ ಹಾಗೂ ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಸೂಚನೆಗಳನ್ನು ನೀಡಿದರು.ಹಾಗೂ ಏನಾದರೂ ತೊಂದರೆ ಆದರೆ ತಮ್ಮ ತಮ್ಮ ಗ್ರಾಮಗಳ ಬಿಟ್ ಪೋಲಿಸ್ ರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಬಗಿಹರಿಸಿಕೊಳ್ಳಿ, ತಮ್ಮ ಸಮಸ್ಯೆ ಬಿಗಿ ಹರಿಯದಿದ್ದರೆ ನನ್ನನು ಸಂಪರ್ಕಿಸಿ ಎಂದು ಹೇಳಿದರು ಹಾಗೂ ಹೋರ್ತಿ ಪೋಲಿಸ್ ಠಾಣೆಗೆ ನಿಯೋಜಿಗೊಂಡ ನಂತರ ಪ್ರಪ್ರಥಮವಾಗಿ ತಡವಲಗಾ ಗ್ರಾಮಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದಾ ವಾಲಿಕಾರ ಅವರು PSI ದೀಪಾ ಗೋಡೆಕಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ತಡವಲಗಾ ಗ್ರಾಮದ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ, ನಾಗಪ್ಪ ಮಕಣಿ, ಗಾಲಿಬಸಾಬ ಧಡೇದ ,ಅಶೋಕ ಮಿರ್ಜಿ, ಮರುಳಸಿದ್ದಪ್ಪ ಬ್ಯಾಳಿ, ಸದಾಸಿವ ಬಗಲಿ ಹಾಗೂ ಪೋಲಿಸ್ ರಾದ ಎಸ್ ಬಿ ಬಿರಾದಾರ,ದಶರಥ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.