2,557 total views
ಶಿಗ್ಗಾವಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸಾರ್ವಜನಿಕರು ಆಸ್ತಿ ತೆರಿಗೆ ಹಣ ಪಾವತಿಸಲು ಬಂದವರಿಂದ ಲಂಚ ಪಡೆಯುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಹಾಗೂ ಸೈನಿಕರು ಪ್ರತಿಭಟನೆ ನಡೆಸಿದರು ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ
ಶ್ರೀ ರವಿಕೃಷ್ಣ ರೆಡ್ಡಿ ಮಾತನಾಡಿ ಸಾರ್ವಜನಿಕರು ತೆರಿಗೆ ಹಣ ಪಾವತಿಸಲು ಸರ್ಕಾರಿ ರಿಯಾಯಿತಿ ನೀಡುತ್ತಿದ್ದು ತೆರಿಗೆ ಹಣ ಪಾವತಿಸುವಂತೆ ಮನೆಮನೆಗೆ ಹೋಗಿ ಮನವಿ ಮಾಡಲಾಗುತ್ತಿದೆ ತೆರಿಗೆ ಹಣ ಪಾವತಿಸದಿದ್ದರೆ ಯಾವುದೇ ಆಸ್ತಿ ದಾಖಲಾತಿ ನೀಡುವುದಿಲ್ಲ ಎಂದು ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಿಗೆ ಮನವಿ ಮಾಡಿಸುತ್ತೇವೆ ಆದರೆ ಶಿಗ್ಗಾವಿ ಪುರಸಭೆಯಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆ ಹಣ ಪಾವತಿಸಲು ಲಂಚದ ರೂಪದಲ್ಲಿ ಹಣವನ್ನು ನೀಡುವ ವ್ಯವಸ್ಥೆ ಪುರಸಭೆಯಲ್ಲಿ ನಡೆಯುತ್ತಿದೆ ಇದನ್ನ ನೋಡಿಯೂ ಅಧಿಕಾರಿ ಸುಮ್ಮನೆ ಇರುವುದನ್ನು ವಿರೋಧಿಸಿ ಆಕೋಶ ವ್ಯಕ್ತಪಡಿಸಿದರು
ಶಿಗ್ಗಾವಿ ಪುರಸಭೆಯ ಕಾರ್ಯಾಲಯದಲ್ಲಿ ಮುಲ್ಲಾ ಎಂಬುವವರು ಖಾಸಗಿ ವ್ಯಕ್ತಿಯಾಗಿದ್ದು ಆತನಿಗೆ ಪುರಸಭೆಯಲ್ಲಿ ಯಾವುದೇ ನೇಮಕಾತಿ ಆದೇಶ ನೀಡಿಲ್ಲ ಈತ ಟೆಂಡರ್ದಾರ್ರ ಮೂಲಕ ಗುತ್ತಿಗೆ ಆಧಾರದ ಮೇಲೆಯೂ ನೇಮಕಾತಿ ಹೊಂದಿಲ್ಲ ಪುರಸಭೆಯಲ್ಲಿ ಈತ ರಾಜಾರೋಶವಾಗಿ ತೆರಿಗೆ ಹಣ ಕಟ್ಟಲು ಬಂದವರಿಂದ 40 ರೂಪಾಯಿ ಲಂಚ ಪಡೆಯುವುದಾಗಿ ಒಪ್ಪಿಕೊಂಡಿದ್ದಾನೆ ಆದರೆ ಕೆಲವರಿಂದ ಈತನೇ ಹೇಳುವ ಹಾಗೆ 300 ರಿಂದ 500 ರೂಪಾಯಿಗಳನ್ನು ಪಡೆಯುತ್ತಿದ್ದಾನೆ ತಕ್ಷಣ ಇದನ್ನು ತಡೆಯಬೇಕೆಂದು ಪುರಸಭೆಯಿಂದ ನೇಮಕಗೊಂಡ ವ್ಯಕ್ತಿಗೆ ತೆರಿಗೆ ಹಣ ಪಾವತಿಸುವ ಕೆಲಸ ನೀಡಬೇಕು ಇಲ್ಲವಾದರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪುರಸಭೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ
ವರದಿ ಬಸವರಾಜ್ ಕೋಲ್ಕಾರ ಬೈಲಹೊಂಗಲ