2,558 total views
ಮುರುಡೇಶ್ವರ ದ ಹೈ ಲ್ಯಾಂಡ್ ಲಾಡ್ಜ್ ನಲ್ಲಿ ನಡೆಯುತ್ತಿದ್ದ ವೆಶ್ಯಾವಾಟಿಕೆ ದಂಧೆ ಮತ್ತು ಮುರುಡೇಶ್ವರ ದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ವಿಫಲವಾದ ಮುರುಡೇಶ್ವರ ಪಿ.ಎಸ್.ಐ ಮಂಜುನಾಥ ಅಮಾನತು(ಸಸ್ಪೆನ್ಡ್)
ಮುರುಡೇಶ್ವರ:ಮುರುಡೇಶ್ವರದ ಬಸ್ತಿನಕ್ಕಿಯ ಹೈ ಲೆಂಡ್ ಲಾಡ್ಜ್ ನಲ್ಲಿ ನಡೆಯುತ್ತಿರುವ ವೆಶ್ಯಾವಾಟಿಕೆ ದಂಧೆ
ಮತ್ತು ಮುರುಡೇಶ್ವರ ದಲ್ಲಿ ನಡೆಯುತ್ತಿ ರುವ ಅಕ್ರಮ ಚಟುವಟಿಕೆಗಳನ್ನು ತಡೆಯಲು ವಿಫಲವಾದ ಮುರುಡೇಶ್ವರ ಪಿ.ಎಸ್.ಐ ಮಂಜುನಾಥ ಅವರನ್ನು
ಕರ್ತವ್ಯ ಲೋಪ ಮತ್ತು ದುರ್ನಡತೆ, ಬೇಜವಾಬ್ದಾರಿ ತನವನ್ನು ಪರಿಗಣಿಸಿ ಇಲಾಖಾ ತನಿಖೆ ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಸಸ್ಪೆನ್ಡ್ ಮಾಡಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ಇಂದು ಆದೇಶ ಮಾಡಿದ್ದಾರೆ.
ಮೊನ್ನೆ ಅಷ್ಟೇ ಮುರುಡೇಶ್ವರ ದ ಬಸ್ತಿ ಮಕ್ಕಿಯ ಹೈ ಲ್ಯಾಂಡ್ ಲಾಡ್ಜ್ ಮೇಲೆ ಜಿಲ್ಲಾ ಸಿ.ಸಿ.ಬಿ ಪೊಲೀಸ್ ಅಧಿಕಾರಿಗಳು ವೆಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮತ್ತು ಲಾಡ್ಜ್ ಮೇಲೆ ದಾಳಿ ನಡೆಸಿ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಬಸ್ತಿನಕ್ಕಿಯ ಹೈ ಲೆಂಡ್ ಹೋಟೆಲ್ನಲ್ಲಿ ನಡೆದಿತ್ತು.ದಾಳಿಯಲ್ಲಿ ಇಬ್ಬರೂ ಯುವತಿಯರು ಬ್ಯಾಗು,ಬಟ್ಟೆ ಎಲ್ಲವನ್ನೂ ಬಿಟ್ಟು ಪರಾರಿಯಾಗಿದ್ದರು. ಹೋಟೆಲ್ ಸಿಬ್ಬಂದಿ ಸೇರಿ ನಾಲ್ವರು ಪುರುಷರನ್ನ ಪೊಲೀಸರು ವಶಕ್ಕೆ ಪಡೆದಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಸೂಚನೆ ಮರೆಗೆ ಕಾರವಾರ ಸಿಇಎನ್ ವಿಭಾಗದ ಡಿವೈಎಸ್ಪಿ ಅಶ್ವಿನಿ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಈ ಹೋಟೆಲ್ ಪಕ್ಕದಲ್ಲಿ ಯಾವುದೇ ಅನುಮತಿ ಇಲ್ಲದೆ ಕ್ಲಬ್ ಕೂಡ ನಡೆಸಲಾಗುತ್ತಿದೆ ಎಂಬ ಮಾಹಿತಿ ಕೂಡ ಬಂದಿತ್ತು.