3,582 total views
ಕರ್ನಾಟಕ ರಾಜ್ಯದಲ್ಲಿ ಒಂದು ಕಡೆ ಅನಾವೃಷ್ಟಿ ಒಂದು ಕಡೆ ಅತಿವೃಷ್ಟಿ ಹೀಗಾಗಿ ದಶಕಗಳಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ರೈತರ ಜೀವನ ಮಟ್ಟ ಸುಧಾರಣೆ ಮಾಡುವ ಯೋಜನೆ ಜಾರಿಗೆ ತರದಿರುವುದು ದುರದೃಷ್ಟಕರ ಸಂಗತಿ. ದಶಕಗಳಿಂದ ರೈತರು ಬೆಳೆದ ಬೆಲೆಗೆ ನಿಗದಿತ ಬೆಂಬಲ ಬೆಲೆ ಸಿಕ್ಕಿಲ್ಲ ಹೀಗಾಗಿ ರೈತ ಆರ್ಥಿಕವಾಗಿ ಸಬಲೀಕರಣವಾಗದೆ ಸಾಲಾ ಸೂಲಾ ಮಾಡಿ ನಷ್ಟ ಅನುಭವಿಸಿ ಸಂಕಷ್ಟದಿಂದ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಸಾಕಷ್ಟಿವೆ ಆದರೆ ಆಳುವ ಸರ್ಕಾರಗಳು ಜನರಿಗೆ ಪುಕ್ಸಟ್ಟೆ ಯೋಜನೆ ಜಾರಿ ಮಾಡಿವೆ. ಆದರೆ ರೈತ ಖಾಸಗಿ ಬ್ಯಾಂಕುಗಳಲ್ಲಿ ಸರ್ಕಾರಿ ಬ್ಯಾಂಕುಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ರಾಜ್ಯದಲ್ಲಿ ಇದುವರೆಗೆ ರೈತ ಬೆಳೆದ ಬೆಳೆಗೆ ನಿಗದಿತ ಬೆಂಬಲ ಬೆಲೆ ಸಿಗದೇ ರೈತ ನಷ್ಟದಲ್ಲಿದ್ದಾನೆ. ಸರ್ಕಾರ ಕೊಡುವ ಈ ಪುಕ್ಸಟ್ಟೆ ಯೋಜನೆಯಿಂದ ರೈತನ ಸಾಲ ಮನ್ನವಾಗುವುದಿಲ್ಲ. ಈ ಪುಕ್ಸಟ್ಟೆ ಯೋಜನೆಯಿಂದ ರೈತನ ಜೀವನಮಟ್ಟ ಸುಧಾರಣೆಯಾಗುವುದಿಲ್ಲ. ಇಡೀ ದೇಶಕ್ಕೆ ಅನ್ನ ಕೊಡುವ ರೈತ ನಷ್ಟದಲ್ಲಿದ್ದರೆ. ಮುಂದೊಂದು ದಿನ. ಮಣ್ಣು ತಿನ್ನಬೇಕಾದ ಪರಿಸ್ಥಿತಿ ಬರಬಹುದು. ಆಳುವ ಸರ್ಕಾರಗಳು ರೈತನ ಕುರಿತು ದೀರ್ಘಸಮಾಲೋಚನೆ ನಡೆಸಿ.ರೈತರ ಜೀವನಮಟ್ಟ ಸುಧಾರಣೆಗೆ ಮುಂದಾಗ ಬೇಕಿದೆ. ಸರಕಾರ ಕೊಡುವ ಉಚಿತ ಯೋಜನೆಗಳಿಂದ ರೈತ ಸಬಲೀಕರಣವಾಗುವುದಿಲ್ಲ. ರೈತ ಸಬಲೀಕರಣವಾಗಬೇಕಾದರೆ. ಆಳುವ ಸರಕಾರಗಳು ರೈತರ ಪಂಪ್ಸೆಟ್ಟುಗಳಿಗೆ ಉಚಿತ ವಿದ್ಯುತ್ ಉಚಿತ ರಸಗೊಬ್ಬರ ರೈತರಿಗೆ ಉಚಿತ ಯಂತ್ರೋಪಕರಣಗಳು ಪ್ರತಿಯೊಬ್ಬರ ರೈತರ ಜಮೀನುಗಳಿಗೆ ಕಡ್ಡಾಯವಾಗಿ ರೈತರಿಗೆ ಬೋರ್ ವೆಲ್ ಹಾಗೂ ಬಾವಿ ಕೊರೆಯಲು ಆರ್ಥಿಕ ಸಹಾಯಧನ ಯೋಜನೆ ಜಾರಿಗೆ ತರಬೇಕು.ಕೆಲವು ನಿಗಮಗಳಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದೆ. ಆದರೆ ಈ ಯೋಜನೆ ಮಧ್ಯವರ್ತಿಗಳ ದಲ್ಲಾಳಿಗಳ ಕೆಲವು ಭ್ರಷ್ಟರ ಪಾಲಾಗುತ್ತಿದೆ. ಇದನ್ನು ತಡೆಗಟ್ಟಿ ಪ್ರತಿಯೊಬ್ಬ ರೈತರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಮಾಳಿಂಗರಾಯ ಕಾರಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ತಾಲೂಕ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ