3,620 total views
ಕುಮಟಾ :ರೋಟರಿ ಕ್ಲಬ್ ಕುಮಟಾ78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರೋಟರಿ ಪರಿವಾರದ ಸದಸ್ಯರಿಗಾಗಿ ದೇಶಭಕ್ತಿ ಸಂದೇಶದ ಕಾರ್ಯಕ್ರಮಗಳ ಸಾಂಸ್ಕೃತಿಕ ಹಬ್ಬವನ್ನು ನಾದಶ್ರೀ ಕಲಾಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಮಕ್ಕಳ, ಮಹಿಳೆಯರ ಹಾಗೂ ರೋಟರಿ ಸದಸ್ಯರ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಸಮಾರಂಭ ಯಶಸ್ವಿಯಾಗಿ ನೆರವೇರಿತು. ರೋಟರಿ ಕುಮಟಾ ಅಧ್ಯಕ್ಷರಾದ ಅತುಲ ಕಾಮತ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು.ಯೋಗೆಶ ಕೊಡ್ಕಣಿ ನಿರ್ವಹಿಸಿದರು.ವಿನಾಯಕ ಹೆಗಡೆ ವಂದಿಸಿದರು. ನವರತ್ನಾ ಜ್ಯುವೆಲ್ಲರಿಯ ಮಾಲಕರಾದ ವಿಶಾಲ ಶೇಟ ಪ್ರತಿಭೆಗಳಿಗೆ ಬಹುಮಾನಗಳನ್ನು ಪ್ರಾಯೋಜಿಸಿದ್ದರು. ಕಾರ್ಯಕ್ರಮ ನಿರ್ವಹಣಾ ಉಸ್ತುವಾರಿ ನಮ್ರತಾ ಶಾನಭಾಗ ಹಾಗೂ ರೋಟರಿ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.