3,434 total views
ಕುಮಟಾ : “ಶತ ಶತಮಾನಗಳಿಂದ ಗುಲಾಮರಾಗಿ ದುಡಿದೂ ದುಡಿದೂ ಬಿಡುಗಡೆ ಹೊಂದಿದ ದಿನದಂದು ೧೯೪೭ ಅಗಸ್ಟ್ ೧೫ ಭಾರತದ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ, ಎಂದು ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ಎನ್ ನಾಯಕ ನುಡಿದರು.ಅವರು ಶಾಲೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಸ್ವಾತಂತ್ರೋತ್ಸವ ಧ್ಯೇಯೋದ್ದೇಶಗಳನ್ನು ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ತಮಗೆಲ್ಲರಿಗೂ ೭೮ನೇ ಸ್ವಾತಂತ್ರೋತ್ಸವ ಶುಭಾಶಯ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿಯಾದ ಮೋಹನ ಬಿ ಕೆರೆಮನೆ “ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಮಾಡಿದ್ದೇನೆ, ದೇಶ ನಮ್ಮಿಂದ ಏನನ್ನು ನೀರೀಕ್ಷಿಸುತ್ತದೆ ಎಂಬ ಕಲ್ಪನೆ ನಮ್ಮಲ್ಲಿ ಮೂಡಿ ಕಾರ್ಯ ಕೈಗೊಂಡು ಗುರಿ ತಲುಪಿದಾಗ ಮಾತ್ರ ಸ್ವಾತಂತ್ರೋತ್ಸವ ಸಾರ್ಥಕತೆ ಸಾಧ್ಯ” ಎಂದರು.
ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ ಮಾತನಾಡಿ “ಬಡವರ ನೊಂದವರ ಹೊಲದಲ್ಲಿ ದುಡಿಯುವ ರೈತರ ಮನೆಗಳಲ್ಲಿ ಸ್ವಾತಂತ್ರ್ಯದ ನಿಜವಾದ ಅರ್ಥ ಕಾಣುವಂತಾಗಲಿ” ಎಂದರು.
ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪ್ರಭಾತಪೇರಿ ದೈಹಿಕ ಶಿಕ್ಷಕರಾದ ನಾಗರಾಜ ನಾಯಕ ಉಸ್ತುವಾರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಸದಸ್ಯರಾದ ಎನ್.ಟಿ.ನಾಯಕ, ಕಾಲೇಜಿನ ನಾಗರಾಜ ಗಾಂವಕರ, ಪ್ರೇಮಾನಂದ ಗಾಂವಕರ, ರಾಜೀವ ಗಾಂವಕರ, ಉದ್ದಂಡ ಗಾಂವಕರ, ವಿನಾಯಕ ಗಾಂವಕರ, ಬೊಮ್ಮಯ್ಯ ನಾಯಕ ಬೊಮ್ಮನ್,ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ್, ಎನ್.ರಾಮು.ಹಿರೇಗುತ್ತಿ, ಮಹಾದೇವ್ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಜಾನಕಿ ಗೊಂಡ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಮಹಾತ್ಮಾಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಸುಮನ್ ಫರ್ನಾಂಡಿಸ್, ತನುಜಾ, ಮಂಗಲಾ, ನಾಗರತ್ನ, ಸ್ವಾತಿ, ವಿಶಾಲಾಕ್ಷಿ ಉಪಸ್ಥಿತರಿದ್ದರು. ಸಿಂಚನ ಸಂಗಡಿಗರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಲೆಯ ವಿದ್ಯಾರ್ಥಿ ಎನ್ ವಿ ಶ್ರೀನಾಗ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿ ನಿರೀಕ್ಷಾ ನಾಯಕ ನಿರೂಪಣೆ ಮಾಡಿದರು. ವಿದ್ಯಾರ್ಥಿ ರಜತ ನಾಯಕ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆದವು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ನೀಡಲಾಯಿತು. ಗೋಪಾಲಕೃಷ್ಣ ಗುನಗಾ ಮತ್ತು ಗೋವಿಂದ ನಾಯ್ಕ ಸಹಕರಿಸಿದರು. ಎಲ್ಲರೂ ಸವಿಯನ್ನು ಅನುಭವಿಸಿದರು.